ಮೈಸೂರು

ನೇತಾಜಿ ಸುಭಾಶ್ಚಂದ್ರಬೋಸ್ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದರು : ಶ್ರೀಹರಿ

ಮೈಸೂರು,ಜ.23:- ವೀರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 121 ನೇ ಜಯಂತಿಯನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು.

ನಗರದ ಚಾಮುಂಡಿ ಪುರಂ ವೃತ್ತದ ಬಳಿಯಿರುವ ಅಪೂರ್ವ ಸ್ನೇಹ ಬಳಗದ ವತಿಯಿಂದ ಬಾಲಬೋಧಿನಿ ಶಾಲೆಯ ಮಕ್ಕಳುಗಳಿಗೆ ಉಚಿತವಾಗಿ ಪಠ್ಯ ಪುಸ್ತಕ, ನೋಟ್ ಬುಕ್,ಪೆನ್ಸಿಲ್ ನ್ನು ಕೊಟ್ಟು,ಸಿಹಿ ವಿತರಿಸಲಾಯಿತು.

ಜಿಎಸ್ ಎಸ್  ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಹರಿ ಸಿಹಿ ಮಕ್ಕಳಿಗೆ ವಿತರಿಸಿ ಮಾತನಾಡಿ ಸುಭಾಶ್ಚಂದ್ರ ಬೋಸ್  ಅವರು ಯುವಕರಿಗೆ ಚೈತನ್ಯವಾಗಿದ್ದಾರೆ. ದೇಶ ಪ್ರೇಮದ ನಿಟ್ಟಿನಲ್ಲಿ ನೇತಾಜಿ ಸುಭಾಶ್ಚಂದ್ರಬೋಸ್ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ ನಿಂದ ಸೀದಾ ಮುಂಬಯಿಗೆ ಬಂದಿಳಿದು ಭಾರತದ ಸ್ವಾತಂತ್ರ್ಯ  ಹೋರಾಟಕ್ಕೆ ಧುಮುಕಿ ಮುಂದಿನ 25 ವರ್ಷಗಳಲ್ಲಿ, 4೦೦೦೦ -45೦೦೦  ಜನರ  ಆಜಾದ್ ಹಿಂದ್ ಫೌಜ್ ಎಂಬ ಸೇನೆಯನ್ನು ಕಟ್ಟಿ  ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು  ಬ್ರಿಟಿಷರು ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ್ದರು ಎಂದರು.  ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರವಾದಿ, ಕ್ರಾಂತಿಕಾರಿ, ಭಾರತೀಯರಾದ ನಾವು ನೆಮ್ಮದಿ,ಸಹಬಾಳ್ವೆ ಯಿಂದ ಜೀವನ ನಡೆಸುತ್ತಿದ್ದೇವೆ ಅಂದರೆ ಅದಕ್ಕೆ ನೇತಾಜಿ ಯವರೇ ಮೂಲ. ಇಂದಿನ ಯುವಕರು ಮನೆಗೊಬ್ಬರಂತೆ ದೇಶ ಕಾಯುವ ಸೈನಿಕರಾಗಿ ಪರಿವರ್ತನೆ ಆಗಬೇಕು ಮತ್ತು ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭ ಲಯನ್ಸ್ ಕ್ಲಬ್ ಮಂಜುನಾಥ್, ಯುವ ಮುಖಂಡ ನವೀನ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ,ಅಪೂರ್ವ ಸ್ನೇಹ ಬಳಗದ ಅಪೂರ್ವ ಸುರೇಶ್, ಕೆ.ಎಂ.ಪಿ.ಕೆ ಟ್ರಸ್ಟ್ ನ ವಿಕ್ರಮ್ ಅಯ್ಯಂಗಾರ್, ಯುವಭಾರತ್ ನ ಜೋಗಿಮಂಜು, ಜಯಕರ್ನಾಟಕ ಯುವ ಘಟಕ ದ ಅಜಯ್ ಶಾಸ್ತ್ರೀ, ಪ್ರಜ್ಞಾವಂತ ನಾಗರಿಕ ವೇದಿಕೆಯ ಕಡಕೊಳ ಜಗದೀಶ್,ಶ್ರೀಧರ್ ಮೂರ್ತಿ, ಅರಿವು ಸಂಸ್ಥೆಯ ಶ್ರೀಕಾಂತ್ ಕಶ್ಯಪ್, ಪ್ರಾಧ್ಯಾಪಕ ಕೃಷ್ಣ ಮೂರ್ತಿ,ಸುನೀಲ್ ಪುರಂ, ಇದ್ದರು. (ಹೆಚ್.ಎನ್,ಎಸ್.ಎಚ್)

Leave a Reply

comments

Related Articles

error: