ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಜ್ಜೆಗೆಟ್ಟ ಸರ್ಕಾರ : ವಿ. ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಮೈಸೂರು,ಜ.23:-  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಜ್ಜೆಗೆಟ್ಟ ಸರ್ಕಾರವಾಗಿದ್ದು ಅವರೊಬ್ಬ ಕಲಬೆರಕೆ ಮುಖ್ಯಮಂತ್ರಿ ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್  ವಾಗ್ದಾಳಿ ನಡೆಸಿದರು.

ಸುತ್ತೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು 2008,2013ಚುನಾವಣೆ ನಡೆಯಿತು .2018 ನೇ  ಚುನಾವಣೆ ಇದು.ರಾಜ್ಯದಲ್ಲಿರುವುದು 21 ನೇ ಅಹಂಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಆಲೋಚನೆ ಇಲ್ಲದ, ಚಿಂತನೆ ಮಾಡದವರು.ವರುಣ ಕ್ಷೇತ್ರ ಏನು ಅಂತ ಗೊತ್ತಿರಲಿಲ್ಲ ಸಿಎಂಗೆ. ಅವರನ್ನು ನಾನೇ ವರುಣದಲ್ಲಿ  ನಿಲ್ಲಿಸಿದ್ದು. ನಾನು ಒಂದೂ ಹಗರಣ ಇಲ್ಲದೇ ಒಂದು ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ಮಾಡಿದ್ದೇನೆ. ನನಗೆ ಮಾಸದ ಗಾಯ ಮಾಡಿದ್ದಾರೆ. ಅವರಿಗೆ ಗೊತ್ತು ಯಾರು ಅಧಿಕಾರ ಪಡೆದುಕೊಳ್ಳಲು ಮುಂದಾಗುತ್ತಾರೋ ಅವರನ್ನು ತುಳಿಯುವ ಚಾಣಾಕ್ಷತನ ಇದೆ. ಇಂತಹ ದುರಾಡಳಿತ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡೇ ಇಲ್ಲ. ರಾಕೇಶ್ ಸಿದ್ದರಾಮಯ್ಯನವರ ಆರೋಗ್ಯವನ್ನು ಸರಿಯಾಗಿ ವಿಚಾರಿಸಿಯೇ ಇಲ್ಲ.ಆದ್ದರಿಂದಲೇ ಅವರು ನಿಧನರಾದರು.ನಿಮ್ಮ ಮಗನಿಗೆ ನೀವು ಅನ್ಯಾಯ ಮಾಡಿಲ್ವಾ ಸಿದ್ದರಾಯಮ್ಯನವರೇ. ಅಧಿಕಾರಕ್ಕಾಗಿ ಯಾವ ಕೆಲಸ ಬೇಕಾದರೂ ಮಾಡ್ತಾರೆ. ಅಧಿಕಾರದ ದರ್ಪದಲ್ಲಿ ಅವರಿಗೆ.ಮದ್ಯಪಾನ ಹೇಗೆ ನಶೆ ಏರಿಸುತ್ತದೆಯೋ ಹಾಗೇ ಅಧಿಕಾರದ ಅಮಲಿನಿಂದ ಮಾತನಾಡುತ್ತಿದ್ದಾರೆ. ವರುಣದಲ್ಲಿ ಕಾಂಗ್ರೆಸ್ ಗೆ ಮತ ಚಲಾಯಿಸಿದರೆ ಸಿಎಂ ದುರಂಹಕಾರಕ್ಕೆ ಕೊಟ್ಟ ಮತವಾಗುತ್ತದೆ.ಜನರು ಕಾಂಗ್ರೆಸ್ ಗೆ ಮತ ಹಾಕದೇ ಬಿಜೆಪಿ ಬೆಂಬಲಿಸಿ. ನೂರಕ್ಕೇ ನೂರರಷ್ಟು ವರುಣಾದಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: