ಮೈಸೂರು

2018ರಲ್ಲಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೇ ಎಲ್ಲರ ಗುರಿಯಾಗಿದೆ : ಮಾಜಿ ಶಾಸಕ ಚಿಕ್ಕಣ್ಣ

ಮೈಸೂರು, ಜ.23:- ವಿಧಾನ ಸಭೆ ಚುನಾವಣೆ ಇನ್ನೂ 4 ತಿಂಗಳು ಇದ್ದು, ಮುಖಂಡರೊಂದಿಗೆ ತಾಲೂಕಿನಲ್ಲಿ ಪಕ್ಷದ ಸಂಘಟನೆ ಮಾಡುವುದಾಗಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ತಿಳಿಸಿದರು.

ಹೆಚ್.ಡಿ.ಕೋಟೆ ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಗೆ ಮೊದಲ ಬಾರಿಗೆ ಆಗಮಿಸಿದ ಚಿಕ್ಕಣ್ಣ ಮಾತನಾಡಿ ಬಿಜೆಪಿಯನ್ನು ತೊರೆದ ಮೇಲೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಎಸ್ಸಿ ಎಸ್ಟಿ ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದೇನೆ. ಪಕ್ಷದ ಕಚೇರಿ ಪ್ರವೇಶಿಸಲು ಒಳ್ಳೆಯ ದಿನ ಇರಲಿಲ್ಲ. ಇವತ್ತು ಒಳ್ಳೆಯ ದಿನವಿದ್ದ ಕಾರಣ ಕಚೇರಿಗೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಚೇರಿ ಪ್ರವೇಶ ಮಾಡಿದ್ದೇನೆ ಎಂದರು. ತಾಲೂಕಿನಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ. ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಲಾಷೆ ಒಂದೇ ಆಗಿದ್ದು, 2018ರಲ್ಲಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೇ ಎಲ್ಲರ ಗುರಿಯಾಗಿದೆ.  ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತುಂಬ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡಿರುವುದಕ್ಕೆ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ತಾಲೂಕಿನಲ್ಲಿ ನನ್ನ ರಾಜಕೀಯ ಪ್ರಾರಂಭಿಸಿದ ನಂತರ ತಾಲೂಕು ಬೋರ್ಡ್ ಉಪಾಧ್ಯಕ್ಷನಾಗಿ 2 ಬಾರಿ ಜಿಲ್ಲಾ ಪರಿಷತ್ ಸದಸ್ಯನಾಗಿ ಒಂದು ಬಾರಿ ಶಾಸಕನಾಗಿ ಜನರು ಆಯ್ಕೆಮಾಡಿದ್ದಾರೆ. ಅದರಂತೆ ತಾಲೂಕಿನ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದರು.

ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ 20 ತಿಂಗಳ ಅವಧಿಯಲ್ಲಿ ಮತ್ತು ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ 11 ತಿಂಗಳು ನೀಡಿದ ಉತ್ತಮ ಆಡಳಿತವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಬಾರಿ ಚುನವಾಣೆಗೆ ಪಕ್ಷದ ಅಭ್ಯರ್ಥಿಯ ಆಯ್ಕೆಯನ್ನು ವರಿಷ್ಠರು ಮಾಡುತ್ತಾರೆ ನಾನು ಸಂಘಟನೆಗಾಗಿ ಬಂದಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಜೆಡಿಎಸ್ ಕಚೇರಿಗೆ ಆಗಮಿಸುವ ಮುನ್ನ ಶಾಸ್ತ್ರೋಕ್ತವಾಗಿ ಗಣಪತಿ ಹೋಮ ನೆರವೇರಿಸಲಾಗಿದ್ದು, 11.50ಕ್ಕೆ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾಸುಲ್ತಾನ ನಜೀರ್ ಅಹ್ಮದ್, ಸದಸ್ಯರಾದ ಪರಿಮಳಶ್ಯಾಮ್, ಎಂ.ಪಿ.ನಾಗರಾಜು, ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ವಿ.ನಾಗರಾಜು, ಸಿ.ಎನ್.ನರಸಿಂಹೇಗೌಡ, ಶಂಭುಗೌಡ, ತಾಲೂಕು ಸ್ಥಾಯಿ ಸಮಿತಿ ಆಧ್ಯಕ್ಷ ಶಂಭೇಗೌಡ, ಮುಖಂಡರಾದ ಮಲೆನಿಂಗಯ್ಯ, ಲಿಂಗೇಗೌಡ, ಹೊ.ಕೆ.ಮಹೇಂದ್ರ, ಚಾ.ನಂಜುಂಡಮೂರ್ತಿ, ಮಾರುತಿಗೌಡ, ಭಾಸ್ಕರ್, ಹರೀಶ್, ಮಟಕೆರೆ ರಾಜೇಶ್, ಶಶಿಧರ್, ಗುರುಸ್ವಾಮಿ, ನಾಗಣ್ಣ, ರಾಜೇಂದ್ರ, ರಾಜಣ್ಣ, ಗೋಪಾಲಸ್ವಾಮಿ, ಶಿವಯ್ಯ, ಗಾಯಿತ್ರಿ ಶಫೀಉಲ್ಲಾ, ತಾರಕ ಮನ್ಸೂರ್, ಚಾಕಹಳ್ಳಿ ಕೃಷ್ಣ, ರಾಜೇಗೌಡ, ಕುಮಾರ್, ಸಿದ್ದೇಗೌಡ, ಇದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: