ಸುದ್ದಿ ಸಂಕ್ಷಿಪ್ತ

ಸಂಗೀತ ನೃತ್ಯೋತ್ಸವ ಜ.26

.ಮೈಸೂರು, ಜ. 23 : ಕುವೆಂಪುನಗರದ ನಾಟ್ಯ ಸಂಗೀತಾಲಯ ರಿಸರ್ಚ್ ಇನ್ಸ್ ಟಿಟ್ಯೂಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ.26,27ರಂದು ನಾದಬ್ರಹ್ಮ ಸಂಗೀತಾ ಸಭಾದಲ್ಲಿ ದಶಮಾನೋತ್ಸವ – ಸಂಗೀತ ನೃತ್ಯೋತ್ಸವ 2018 ಅನ್ನು ಆಯೋಜಿಸಿದೆ.

ಜ.26ರ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಕೆ.ವಿ.ಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಮಹಾರಾಣಿ ಕಾಲೇಜಿನ ಸಂಗೀತ ಶಿಕ್ಷಕ ವಿದ್ವಾನ್ ಕೆ.ಆರ್.ಶ್ರೀಧರ್, ನಂತರ ತ್ಯಾಗರಾಜರ ಉತ್ಸವ ಸಂಪ್ರದಾಯ ಮತ್ತು ದಿವ್ಯ ನಾಮ ಸಂಕೀರ್ತನೆ ಗಾಯನವನ್ನು ಕೊಳಲು ವಾದಕ ಮಾ.ವಿಷ್ಣು ಕೌಂಡಿನ್ಯ ನಡೆಸುವರು. ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರಿಂದ ಭರತನಾಟ್ಯ.

ಜ.27ರಂದು ಸಿದ್ಧಾರ್ಥನಗರದ ಶ್ರೀಮಾತಾ ನೃತ್ಯ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಜಯಶ್ರೀ ಮಹೇಶ್ ರಿಂದ ನೃತ್ಯ ವೈವಿದ್ಯ, ವಿದ್ವಾನ್ ಕೆ.ಗುರುಪ್ರಸಾದ್ ರಿಂದ ವಾಸುದೇವಾಚಾರ್ಯರ ರಚನೆಗಳ ಹಾಡು, ವಿದುಷಿ ರಾಧಿಕಾರ ಐಯ್ಯಂಗಾರ್ ರಿಂದ ಭರತನಾಟ್ಯ, ವಿದುಷಿ ಕೌಸಲ್ಯ ಚಂದ್ರರಿಂದ ಕಥಕ್ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: