ಕರ್ನಾಟಕ

ಜ.31 : ‘ಮಡ್ಲಂಡ ಕ್ರಿಕೆಟ್ ಕಪ್’ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ 

ರಾಜ್ಯ(ಮಡಿಕೇರಿ) ಜ.23 :- ಪ್ರಸಕ್ತ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮಡಿಕೇರಿಯಲ್ಲಿ ನಡೆಯಲಿರುವ ‘ಮಡ್ಲಂಡ ಕ್ರಿಕೆಟ್ ಕಪ್-2018’ರ ಪ್ರಯುಕ್ತ ಜ.31 ರಂದು ಮಡಿಕೇರಿಯಲ್ಲಿ ಮಡ್ಲಂಡ ಕಪ್ ಕ್ರಿಕೆಟ್ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ ಎಂದು ಕ್ರಿಕೆಟ್ ಉತ್ಸವ ಆಯೋಜನಾ ಸಮಿತಿ ಸಲಹೆಗಾರರಾದ ಐತಿಚಂಡ ರಮೇಶ್ ಉತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕಾನ್ಫರೆನ್ಸ್ ಹಾಲ್‍ನಲ್ಲಿ ರಸಪ್ರಶ್ನೆ ನಡೆಯಲಿದೆ ಎಂದರು. ಈ ಕಾರ್ಯಕ್ರಮಕ್ಕೆ ವಯೋಮಿತಿಯ ಭೇದವಿಲ್ಲದೆ ವಿದ್ಯಾರ್ಥಿ ತಂಡಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಯಾವುದೇ ವಿಭಾಗಗಳಿಲ್ಲ. ಒಂದು ವಿದ್ಯಾಸಂಸ್ಥೆಯಿಂದ ಒಂದು ತಂಡಕ್ಕೆ ಮಾತ್ರ ಅವಕಾಶವಿದೆ. ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಇರಬೇಕೆಂದು ಮಾಹಿತಿಯನ್ನಿತ್ತರು.

ಆಸಕ್ತರು ತಮ್ಮ ತಂಡದ ಹೆಸರನ್ನು ಜನವರಿ 27ರ ಒಳಗಾಗಿ ಐತಿಚಂಡ ರಮೇಶ್ ಉತ್ತಪ್ಪ, ಮೊ.ಸಂ : 9483049005, ಬೊಳ್ಳಜಿರ ಅಯ್ಯಪ್ಪ 98807 78047 ಇವರಲ್ಲಿ ನೋಂದಾಯಿಸಿಕೊಳ್ಳಬಹುದು.

ಸುದ್ದಿಗೋಷ್ಠಿಯಲ್ಲಿ ಮಡ್ಲಂಡ ಕ್ರಿಕೆಟ್ ಕಪ್ ಆಯೋಜನಾ ಸಮಿತಿ ಅಧ್ಯಕ್ಷರಾದ ಮೋನಿಶ್ ಸುಬ್ಬಯ್ಯ, ಸಂಚಾಲಕ ಪ್ರತೀಶ್ ಪೂವಯ್ಯ ಹಾಗೂ ಖಜಾಂಚಿ ಬೊಳ್ಳಜಿರ ಅಯ್ಯಪ್ಪ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: