ಮೈಸೂರು

ಸಾಂಸ್ಕೃತಿಕ ನಗರಿ ಮೈಸೂರಿಗೆ ಲೋಗೋ ವಿನ್ಯಾಸ : ಆಹ್ವಾನ

.ಮೈಸೂರು,ಜ.23 – ಮೈಸೂರು ನಗರವು ಪ್ರಸಿದ್ದ ಪ್ರವಾಸಿ ತಾಣವಾಗಿದ್ದು, ಮೈಸೂರನ್ನು ಬ್ರ್ಯಾಂಡ್ ಆಗಿಸಲಾಗುತ್ತಿದೆ.  ಮೈಸೂರು ಬ್ರಾಂಡ್ ಕುರಿತಂತೆ ಲೋಗೋ ವಿನ್ಯಾಸ ಮಾಡಲು ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ದೆಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು www.mysore.nic.in ಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ನಿಗದಿತ ನಮೂದುಗಳನ್ನು [email protected] ಇ-ಮೇಲ್ ಮೂಲಕ ಸಲ್ಲಿಸುವುದು.ನಮೂದುಗಳನ್ನು ಸಲ್ಲಿಸಲು ಫೆಬ್ರವರಿ 29 ಕೊನೆಯ ದಿನಾಂಕವಾಗಿರುತ್ತದೆ. ನಮೂದುಗಳು/ಲೋಗೋ ವಿನ್ಯಾಸ ಎPಇಉ/Pಓಉ ನಮೂನೆಗಳಲ್ಲಿ ಸಲ್ಲಿಸುವುದು.

ಲೋಗೋದಲ್ಲಿ ನಗರದ ಮೌಲ್ಯಗಳು, ಗುಣಗಳು, ಆಕಾಂಕ್ಷೆಗಳು ಮತ್ತು ನಿಜವಾದ ಅಂಶಗಳನ್ನು ಪ್ರಸ್ತಾಪಿಸಬೇಕಿರುತ್ತದೆ. ಜಾಗತಿಕ ಮಟ್ಟದ ಪ್ರವಾಸಿಗರು/ಹೂಡಿಕೆದಾರರ ಅವಶ್ಯಕ ಒಳನೋಟಗಳನ್ನು ಅಭಿವೃದ್ದಿಪಡಿಸುವುದು. ಆಶ್ಚರ್ಯವನ್ನುಂಟು ಮಾಡುವಂತಹ ದೊಡ್ಡ ಕಲ್ಪನೆಗಳು, ಸ್ಫೂರ್ತಿ ಸೆಲೆಗಳು ಮುಂಬರುವ ವರ್ಷಗಳಲ್ಲಿ ಹೋಲಿಕೆಯನ್ನು ಮಾಡುವಂತಿರಬೇಕು.

ನಮೂನೆಯು ಸ್ಪರ್ಧಿಯ ವಿವರ/ಸಂಸ್ಥೆಯ ವಿವರ ವಿಳಾಸಗಳನ್ನೊಳಗೊಂಡಿರಬೇಕು.(ಭಾವಚಿತ್ರ ಮತ್ತು ವಿಳಾಸದ ಪ್ರತಿ,ಹುಟ್ಟಿದ ದಿನಾಂಕ,ಮೊಬೈಲ್ ಸಂಖ್ಯೆ ,ಇ-ಮೇಲ್ ವಿಳಾಸ ಸಲ್ಲಿಸುವುದು) ಮತ್ತು ಪೇಜ್ 2 ರಲ್ಲಿ ಲೋಗೋ ಮತ್ತು ವ್ಯಾಖ್ಯಾನ: ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿಯೂ ಲೋಗೋದ ತಾರ್ಕಿಕ ವ್ಯಾಖ್ಯಾನ ನೀಡುವುದು.(50 ಕ್ಕಿಂತ ಹೆಚ್ಚು ಪದಗಳನ್ನು ಮೀರಿರಬಾರದು).

ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ,  ಮೊದಲನೇ ಮಹಡಿ,ಹೊಟೇಲ್ ಮಯೂರ ಹೊಯ್ಸಳ, #2,ಜೆ.ಎಲ್.ಬಿ ರಸ್ತೆ,ಮೈಸೂರು ದೂರವಾಣಿ ಸಂಖ್ಯೆ:0821-2422096  email :[email protected] ಸಂಪರ್ಕಿಸುವುದು. (ಕೆ.ಎಂ.ಆರ್)

Leave a Reply

comments

Related Articles

error: