ಮೈಸೂರು

ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಬಗ್ಗೆ ಅರಿವಿರಬೇಕು : ಮೊಹಮ್ಮದ್ ಮುಜೀರುಲ್ಲಾ ಸಿ.ಜಿ

ಮೈಸೂರು,ಜ.23:-  ಶ್ರೀ ನಟರಾಜ ಸಭಾ ಭವನ, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಸಬಲೀಕರಣ ಮತ್ತು ಮಹಿಳಾ ದೌರ್ಜನ್ಯ ತಡೆಗಟ್ಟುವ ಸಮಿತಿ ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಇವರ ವತಿಯಿಂದ “ಕಾನೂನಿನ ಅರಿವು ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶ್ರೀ ನಟರಾಜ ಪ್ರತಿಷ್ಠಾನ ಅಧ್ಯಕ್ಷ ಚಿದಾನಂದ ಸ್ವಾಮಿಗಳು ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಮುಜೀರುಲ್ಲಾ ಸಿ.ಜಿ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಕಾನೂನಿನ ಉಲ್ಲಂಘನೆ ಕ್ಷಮೆಗೆ ಅರ್ಹವಲ್ಲ.  ಕಾನೂನಿನ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಗೂ ಅರಿವಿರಬೇಕು. “ಭಾರತದ ಸಂವಿಧಾನವು, ಭಾರತದಲ್ಲಿರುವ ಎಲ್ಲಾ ಕಾನೂನುಗಳಿಗೆ ತಾಯಿ”, ಕಾನೂನಿನ ಅರಿವಿಲ್ಲವೆಂದರೆ, ಕ್ಷಮೆ ಇಲ್ಲ ಎಂಬ ಮಾತುಗಳನ್ನು ಪ್ರಸ್ತಾಪಿಸಿ ಹಲವಾರು ಕಾನೂನಿನ ವಿಷಯಗಳನ್ನು ತಿಳಿಸಿದರು. ನಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಒಳಗೊಂಡಿರುವ ಹಲವಾರು ಕಾರ್ಯಗಳನ್ನು ವಿವರಿಸಿದರು. ಮಹಿಳೆಯರಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಅಂಗವಿಕಲರು, ಕಾರ್ಮಿಕ ವರ್ಗದವರಿಗೆ ದೊರೆಯುತ್ತಿರವ ಉಚಿತ ಕಾನೂನಿನ ಸಲಹೆಗಳ ಬಗ್ಗೆ ತಿಳಿಸಿದರು. ಈ ಪ್ರಾಧಿಕಾರ ಜನರಿಗಾಗಿ ಕಾನೂನಿನ ಅರಿವನ್ನು ಮೂಡಿಸಿ, ಅವರ ಜೊತೆಯಲ್ಲೇ ನಿಂತು ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡುತ್ತದೆ ಎಂಬ ವಿಶ್ವಾಸವನ್ನು ತುಂಬಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪ್ಯಾನಲ್ ವಕೀಲ ಸುಂದರ್ ರಾಜ್  ಇವರು ಮಹಿಳೆಯರ ದೌರ್ಜನ್ಯ ತಡೆಗಟ್ಟುವ ಕಾನೂನಿನ ಬಗ್ಗೆ ಮಾತನಾಡಿದರು. ಮಹಿಳೆಯರಿಗೆ ಇವರು 42 ಕಾನೂನುಗಳ ಉಪಯೋಗಗಳನ್ನು ತಿಳಿಸಿದರು. ವರದಕ್ಷಿಣೆ ಕುರಿತಾದ ದೌರ್ಜನ್ಯವನ್ನು ತಡೆಗಟ್ಟುವ ಕಾನೂನಿನ ನಿಯಮಗಳು ಹಾಗೂ ಮಹಿಳೆಯರಿಗೆ ಸಂಬಂಧಪಟ್ಟ ಕಾನೂನುಗಳ ಬಗ್ಗೆ ಅರಿವನ್ನು ಮೂಡಿಸಿದರು.

ಈ ಸಂದರ್ಭ  ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ  ಡಾ. ಎಂ. ಶಾರದ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ  ಡಾ. ವಿ. ಚಂದ್ರಸೇನ್, ಐಕ್ಯೂಎಸಿ ಸಂಚಾಲಕ ಎನ್.ಜಿ. ಲೋಕೇಶ್,  ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: