ದೇಶಮನರಂಜನೆ

`24ನೇ ಕ್ರಿಸ್ಟಲ್ ಆವಾರ್ಡ್’ ಗೆ ಭಾಜನರಾದ ಶಾರೂಖ್ ಖಾನ್

ಮುಂಬೈ,ಜ.24-ಬಾಲಿವುಡ್ ನ ಬಾದ್ ಷಾ ಶಾರೂಖ್ ಖಾನ್ ತಮ್ಮ ರಿಯಲ್ ಲೈಫ್ ನಲ್ಲಿ ಮಾಡಿರುವ ಒಳ್ಳೆ ಕೆಲಸಕ್ಕೆ ’24ನೇ ಕ್ರಿಸ್ಟಲ್ ಆವಾರ್ಡ್’ ಪಡೆದುಕೊಂಡಿದ್ದಾರೆ.

ಸ್ವಿಜರ್ ಲ್ಯಾಂಡ್ ನಲ್ಲಿ ಅದ್ದೂರಿಯಾಗಿ ನಡೆದ ವಿಶ್ವ ಆರ್ಥಿಕ ವೇದಿಕೆಯ 48ನೇ ವಾರ್ಷಿಕ ಸಮ್ಮೇಳನದಲ್ಲಿ ನಟ ಶಾರುಖ್​ ಖಾನ್​ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರದೊಂದಿಗೆ ಪ್ರಸಿದ್ಧ ಸಂಗೀತಗಾರ ಎಲ್ಟನ್ ಜಾನ್‌ ಮತ್ತು ಹಾಲಿವುಡ್‌ ಸ್ಟಾರ್‌ ಕೇಟ್‌ ಬ್ಲಾಂಕೆಟ್ ಅವರಿಗೂ ಸಹ ಪ್ರಶಸ್ತಿ ನೀಡಲಾಯಿತು.

ಆಸಿಡ್ ದಾಳಿಗೆ ಒಳಗಾದವರ ಬಗ್ಗೆ ಮತ್ತು ಮಹಿಳೆಯರ ಹಕ್ಕುಗಳನ್ನು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿರುವ ಶಾರೂಖ್ ಅವರ ಆ ಒಳ್ಳೆಯ ಕೆಲಸಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ತೆಗೆದುಕೊಂಡು ಖುಷಿಯನ್ನು ಶಾರೂಖ್ ಖಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಭಾರತದ ಕೆಲವು ಗಣ್ಯರಿಗೆ ‘ಕ್ರಿಸ್ಟಲ್ ಅವಾರ್ಡ್’ ಪ್ರಶಸ್ತಿಯನ್ನು ನೀಡಲಾಗಿದ್ದು, ಬಾಲಿವುಡ್ ನಟ ಅಮಿತಾಭ್‌ ಬಚ್ಚನ್‌, ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್, ಅಮ್ಜದ್‌ ಆಲಿ, ಮಲ್ಲಿಕಾ ಸಾರಾಭಾಯಿ, ರವಿಶಂಕರ್‌ ಹಾಗೂ ಶಬಾನ ಆಜ್ಮಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. (ವರದಿ-ಎಂ.ಎನ್)

Leave a Reply

comments

Related Articles

error: