ಸುದ್ದಿ ಸಂಕ್ಷಿಪ್ತ
ಜ.30ರಿಂದ ರಾಷ್ಟ್ರೀಯ ರಂಗ ಉತ್ಸವ
ಮೈಸೂರು, ಜ. 24 : ಅಭಿಯಂತರರು ವತಿಯಿಂದ ‘ರಾಷ್ಟ್ರೀಯ ರಂಗ ಉತ್ಸವ’ ಜ.30 ರಿಂದ ಫೆ.4ವರೆಗೆ ಕಲಾಮಂದಿರದ ಕಿಂದರಜೋಗಿ ಆವರಣದಲ್ಲಿ.
ಜ.30ರ ಸಂಜೆ 6ಕ್ಕೆ ಹಿರಿಯ ರಂಗ ನಿರ್ದೇಶಕ ಪದ್ಮಶ್ರೀ ಎಂ.ಎಸ್ ಸತ್ಯು ಅವರಿಂದ ಉದ್ಘಾಟನೆ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಮೊದಲಾದವರ ಭಾಗಿಯಾಗುವರು.
ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನ ಹಾಗೂ ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯುವುದು. (ಕೆ.ಎಂ.ಆರ್)