ಕರ್ನಾಟಕ

ರಥ ಸಪ್ತಮಿ ಪ್ರಯುಕ್ತ ಸೂರ್ಯ ನಮಸ್ಕಾರ

ರಾಜ್ಯ(ಮಡಿಕೇರಿ)ಜ.24:- ರಥ ಸಪ್ತಮಿ ಪ್ರಯುಕ್ತ ಸೋಮವಾರಪೇಟೆ ತಾಲೂಕಿನ ದೈವಿಕ ಇತಿಹಾಸ ಹೊಂದಿರುವ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆ ದಡದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ 108 ಸೂರ್ಯ ನಮಸ್ಕಾರ ಮಾಡಲಾಯಿತು.

ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ಸೂರ್ಯನ ಜನ್ಮದಿನವಾಗಿದ್ದು, ಇದರೊಂದಿಗೆ ಸಪ್ತಮಿ ತಿಥಿಯ ಅಧಿದೇವನೂ ಸೂರ್ಯನೇ ಆಗಿರುವದರಿಂದ ಈ ದಿನದಂದು ಸೂರ್ಯಾರಾಧನೆಗೆ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ರಾಗಿಣಿ ತಿಳಿಸಿದರು. ಹೊನ್ನಮ್ಮನ ಕೆರೆ ದಡದಲ್ಲಿ ಬೆಳಗಿನ ಜಾವ 6 ರಿಂದ 7.30ರವರೆಗೆ ಆರ್ಟ್ ಆಫ್ ಲಿವಿಂಗ್‍ನ ಸದಸ್ಯರುಗಳು 108 ಸೂರ್ಯ ನಮಸ್ಕಾರ ಮಾಡಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: