ಮೈಸೂರು

ಕೆ.ಆರ್. ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ: ಶೋಭಾ ಕರಂದ್ಲಾಜೆ ಭಾಗಿ

ಎಚ್.ವಿ. ರಾಜೀವ್ ಸ್ನೇಹ ಬಳಗದ 125ನೇ ವಾರದ ಸ್ವಚ್ಛತಾ ಆಂದೋಲನ ಆಚರಣೆ ಮತ್ತು ಶ್ರೀ ಕಲ್ಕಿ ಮಾನವ ಸೇವಾ ಸಮಿತಿಯ ಸ್ವಚ್ಛತಾ ಅಭಿಯಾನದ 100ನೇ ವಾರದ ಆಚರಣೆಯ ಅಂಗವಾಗಿ ಭಾನುವಾರದಂದು ಬೆಳಗ್ಗೆ  ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸಂಸದೆ ಶೋಭಾ ಕರಂದ್ಲಾಜೆ, ಮೈಸೂರಿನ ಮೇಯರ್ ಬಿ.ಎಲ್. ಭೈರಪ್ಪ, ಪ್ರಮತಿ ಶಾಲೆಯ ಮಕ್ಕಳು, ಮಹರ್ಷಿ ಪಬ್ಲಿಕ್ ಶಾಲೆಯ ಮಕ್ಕಳು,  ಸ್ಪoದನ ಟ್ರಸ್ಟ್ ಸದಸ್ಯರು,   ಶ್ರೀ ಗುರು ರಾಘವೇಂದ್ರ ಸ್ನೇಹ ಬಳಗದ ಸದಸ್ಯರು,  ಇನ್ನರ್ ವ್ಹೀಲ್ ಸದಸ್ಯರು ಹಾಗೂ ಮಹಾರಾಜ ಗ್ರೌಂಡ್ ಮಾರ್ನಿಂಗ್ ವಾಕರ್ಸ್ ಅಸೋಸಿಯೇಷನ್ ಸದಸ್ಯರು, ಲಯನ್  ನಿಸರ್ಗ ಅಸೋಸಿಯೇಷನ್ ಸದಸ್ಯರು, ಕಾತಿ೯ಕ್ ಟ್ರಸ್ಟ್ ಸದಸ್ಯರು, ನಮ್ಮ ಖುಷಿ ಟ್ರಸ್ಟ್ ಸದಸ್ಯರು , ಆಶ್ರಯ ಟ್ರಸ್ಟ್, 92.7 FM  ಎಜಿ ಅವಿನಾಶ್ ತಂಡದ ಸದಸ್ಯರು,  ನಟರಾಜ  ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟದ ಸದಸ್ಯರು, ಸಮಗ್ರ ಕನಾ೯ಟಕ ರಕ್ಷಣ ವೇದಿಕೆ ಸದಸ್ಯರು, ಜ಼ೆರಾಕ್ಸ್ ಅಸೋಸಿಯೇಷನ್ ಸದಸ್ಯರು, ಎಲ್ಲ  ಪೌರ ಕಾಮಿ೯ಕ  ಮುಖ೦ಡರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

kr-hospital-2

Leave a Reply

comments

Related Articles

error: