ಮನರಂಜನೆ

ಮುಖಮುಚ್ಚಿ ಅನುಷ್ಕಾಳನ್ನು ಭೇಟಿಯಾಗಲು ಬಂದ ವ್ಯಕ್ತಿ …..?

ಹೈದರಾಬಾದ್,ಜ.245: ಟಾಲಿವುಡ್‍ನ ಲವ್ ಬರ್ಡ್ಸ್  ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಈ ನಡುವೆ ಸಿನಿ ಅಂಗಳದಲ್ಲಿ ಭಾರಿ ವಸುದ್ದಿಯಾಗುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ತಮ್ಮ ಮುಂಬರುವ ‘ಭಾಗಮತಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಪ್ರಭಾಸ್ ಸ್ವತಃ ‘ಭಾಗಮತಿ’ ಸೆಟ್‍ಗೆ ತೆರಳಿ ಅನುಷ್ಕಾರನ್ನು ಭೇಟಿಯಾಗಿದ್ದಾರೆ. ಸೆಟ್ ಪ್ರವೇಶಕ್ಕೂ ಮುನ್ನ ಯಾರಿಗೂ ತಿಳಿಯಬಾರದೆಂದು ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡು ಬಂದಿದ್ದಾರೆ.    ಪ್ರಭಾಸ್ ‘ಸಾಹೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ತಮ್ಮ ಬ್ಯೂಸಿ ನಡುವೆ ಬಿಡುವು ಮಾಡಿಕೊಂಡು ಅನುಷ್ಕಾ ಅವರನ್ನ ಭೇಟಿಯಾಗಿದ್ದಾರೆ.  ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಭಾಗಮತಿ ಚಿತ್ರದ ಪ್ರಮೋಶನಲ್ ವಿಡಿಯೋ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಭಾಸ್ ಚಿತ್ರೀಕರಣದ ಸೆಟ್ ಗೆ ಭೇಟಿ ನೀಡಿರುವುದು ಕಂಡು ಬಂದಿದೆ. ( ವರದಿ: ಪಿ.ಎಸ್ )

Leave a Reply

comments

Related Articles

error: