ಮೈಸೂರು

ಜ.28ರಂದು ಜಯರಾಮು ಕೀಲಾರ ಅಭಿನಂದನಾ ಸಮಾರಂಭ

ಮೈಸೂರು, ಜ. 25 : ಎನ್.ಜಯರಾಮು ಕೀಲಾರ ಸ್ನೇಹ ಬಳಗದ ವತಿಯಿಂದ ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಜ.28ರಂದು ಬೆಳಿಗ್ಗೆ 10ಗಂಟೆಗೆ ಸಾಮಾಜಿಕ ಹೋರಾಟಗಾರ ಎನ್.ಜಯರಾಮು ಕೀಲಾರರ 60ನೇ ಜನ್ಮದಿನದ ಪ್ರಯುಕ್ತ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಹೇಳಿದರು.

ಕೀಲಾರ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಅಭಿನಂದಿಸುವರು. ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆ, ಸಾಹಿತಿಗಳಾದ ಪ್ರೊ.ಮಲೆಯೂರು ಗುರುಸ್ವಾಮಿ, ಪ್ರೊ.ಎಂ.ಕೃಷ್ಣೇಗೌಡ ಅಭಿನಂದನಾ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಚಿಂತಕ ಡಾ.ಎಸ್.ತುಕಾರಾಮ್ ಭಾಗಿಯಾಗಲಿದ್ದು ಇವರೊಂದಿಗೆ ಹಲವು ಗಣ್ಯರು ಉಪಸ್ಥಿತರಿರುವರು ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೀಲಾರ ಅವರು ಗ್ರಾಮೀಣ ಕುಟುಂಬದಿಂದ ಬಂದವರು. ಚಿಕ್ಕಂದಿನಿಂದಲೂ ನಾಯಕತ್ವದ ಗುಣ ಹೊಂದಿದ್ದ ಅವರು ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಾಗ ಮಂಡ್ಯ ಜಿಲ್ಲಾ ವಿದ್ಯಾರ್ಥಿ ಬಳಗದ ನಾಯಕರಾಗಿ ರೂಪುಗೊಂಡರು. ಹಳ್ಳಿಗಳಿಂದ ನಗರಕ್ಕೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದ ಬಡವಿದ್ಯಾರ್ಥಿಗಳ ನೆರವಿಗಾಗಿ ದಾನಿಗಳ ಬೆಂಬಲ ಪಡೆದು ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ಹೀಗೆ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ಸಮಾಜ ಕಾರ್ಯ, ಹೋರಾಟದ ಮನೋಭಾವ ಗುರುತಿಸಿ ಅಭಿನಂದಿಸಲಾಗುತ್ತಿದೆ ಎಂದು ತಿಳಿಸಿದರು.

ಬಳಗದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಬಿ.ಕೆ.ಚಂದ್ರಶೇಖರೇಗೌಡ ಮಾತನಾಡಿದರು, ಸಮಿತಿ ಕಾರ್ಯಾಧ್ಯಕ್ಷ ಕೆ.ಕಾಳಚನ್ನೇಗೌಡ, ಸದಸ್ಯ ಎಂ.ರುದ್ರಯ್ಯ ಗೋಷ್ಠಿಯಲ್ಲಿ ಭಾಗವಹಿಸಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: