ಮೈಸೂರು

ನಾಳೆ ಜ.26ರಂದು ನಗರದ ವಿವಿದೆಡೆ ಗಣರಾಜ್ಯೋತ್ಸವ

ಮೈಸೂರು, ಜ. 25 : ನಾಳೆ 69ನೇ ಗಣರಾಜ್ಯೋತ್ಸವವನ್ನು ನಗರದ ವಿವಿಧ ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು ಸಡಗರ ಮತ್ತು ಸಂಭ್ರಮದಿಂದ ಹಮ್ಮಿಕೊಂಡಿದ್ದು ಈ ಕೆಳಕಂಡ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿವೆ.

ಅಭ್ಯುದಯ ಮಹಿಳಾ ಸಮಾಜ : ನಗರದ ಅಭ್ಯುದಯ ಮಹಿಳಾ ಸಮಾಜದಿಂದ 69ನೇ ಗಣರಾಜ್ಯೋತ್ಸವವನ್ನು ಜ.26ರಂದು ಬೆಳಗ್ಗೆ 8 ಗಂಟೆ, ಜೆ.ಪಿ.ನಗರದ ಡಾ.ಪುಟ್ಟರಾಜಗವಾಯಿಗಳ ಕ್ರೀಡಾಂಗಣ ಒಕ್ಕೂಟ ಸಂಸ್ಥೆಯಲ್ಲಿ ಏರ್ಪಡಿಸಿದೆ. ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಧ್ವಜಾರೋಹಣ ನೆರವೇರಿಸುವರು, ಲಯನ್ಸ್ ಕೆ.ಪಿ.ಬಸವರಾಜಸ್ವಾಮಿ ಕೆ.ಎ.ಸಿದ್ದಲಿಂಗಪ್ಪ, ಕೆ.ಎಸ್.ನಾಗರಾಜು ಮೊದಲಾದವರು ಇರುವರು.

ಅರಸು ಮಂಡಲಿ ಸಂಘ : ದ್ವಜಾರೋಹಣವನ್ನು ಅಂದು ಬೆಳಗ್ಗೆ 8.30ಕ್ಕೆ ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಡಾ.ತೇಜಶ್ರೀ ನೆರವೇರಿಸುವರು, ನಿವೃತ್ತ ಹವಾಲ್ದಾರ್ ಮಹೇಶ್ ರಾಜೇ ಅರಸ್ ಪಾಲ್ಗೊಲ್ಳುವರು.

ತರಳುಬಾಳು ಶಿಕ್ಷಣ ಕೇಂದ್ರ : ಕುವೆಂಪುನಗರದ ತರಳಬಾಳು ಶಿಕ್ಷಣ ಕೇಂದ್ರದ್ಲಲಿ ಬೆಳಗ್ಗೆ 8.30ಕ್ಕೆ ಧ್ವಜಾರೋಹಣ ಡಾ.ಎನ್.ಎಸ್.ಹರಿನಾರಾಯಣ ನೆರವೇರಿಸುವರು.ಕಾಲೇಜಿನ ಪ್ರಾಚಾರ್ಯರಾದ ಎಸ್.ಶಿವಕುಮಾರ್ ಅಧ್ಯಕ್ಷತೆ ವಹಿಸುವರು.

ಮಹಾರಾಣಿ ಮಹಿಳಾ ಕಲಾ ಕಾಲೇಜು : ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರದ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿರುವ ಗಣರಾಜ್ಯೋತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಡಾ.ಕೆ.ಎಲ್.ಉಮಾಪತಿ, ಡಾ.ರಶ್ಮಿ ಚನ್ನಯ್ಯ, ಡಾ.ಸೌಮ್ಯಕುಮಾರ್, ಡಾ.ಬಿ.ವಿ.ವಸಂತಕುಮಾರ್ ಭಾಗಿಯಾಗುವರು. ಪ್ರಾಂಶುಪಾಲ ಡಾ.ಎಂ.ಚನ್ನಬಸವೇಗೌಡ ಅಧ್ಯಕ್ಷತೆ ವಹಿಸುವರು.

ವಿಕಲಚೇತನ ಅಭ್ಯುದಯ ಸೇವಾ ಸಂಸ್ಥೆ : ವಿಕಲಚೇತನ ಅಭ್ಯುದಯ ಸೇವಾ ಸಂಸ್ಥೆಯಿಂದ 69ನೇ ಗಣರಾಜ್ಯೋತ್ಸವವನ್ನು ಜ.26ರ ಬೆಳಗ್ಗೆ 9.30ಕ್ಕೆ ಜನತಾನಗರದ ಮಾರುತಿ ಟೆಂಟ್ ರಸ್ತೆಯ 5ನೇ ಕ್ರಾಸ್ ನಂ.1825ರಲ್ಲಿ ಆಯೋಜಿಸಿದೆ.

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ : ಸಂಸ್ಥೆಯ ಬಯಲು ರಂಗಮಂದಿರದಲ್ಲಿ, ಬೆಳಗ್ಗೆ 7.45ಕ್ಕೆ ಧ್ವಜಾರೋಹಣ, ಸಂಘದ ಕೋಶಾಧ್ಯಕ್ಷ ಎಸ್.ಎನ್.ಲಕ್ಷ್ಮೀನಾರಾಯಣ, ಕೆ.ಎಸ್.ಓ.ಯು ವಿಶ್ರಾಂತ ಕುಲಪತಿ ಡಾ.ಎಂ.ಜಿ.ಕೃಷ್ಣನ್ ಮೊದಲಾದವರು ಭಾಗಿಯಾಗುವರು.

ಮರಿಮಲ್ಲಪ್ಪ ವಿದ್ಯಾ ಸಂಸ್ಥೆ : ಸಂಸ್ಥೆಯ ಗೌರವಾಧ್ಯಕ್ಷ ಎಸ್.ಪರಮಶಿವಯ್ಯ ಅಧ್ಯಕ್ಷತೆಯಲ್ಲಿ, 8.30ಕ್ಕೆ ಧ್ವಜಾರೋಹಣ, ಪ್ರಾಚ್ಯವಿದ್ಯಾ ಸಂಶೋಧನಾಲಯ ಹಿರಿಯ ಸಂಶೋಧಕ ಡಾ.ಹೆಚ್.ವಿ.ನಾಗರಾಜರಾವ್, ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ ಹಾಜರಿರುವರು.

ಜನಹಿತ ಸಂಘ : ಸಂಘದ ಉದ್ಯಾನವನದಲ್ಲಿ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ಎನ್.ಡಿ.ಭಾರ್ಗವಿ , ಆಶಾ ಶಶಿಕುಮಾರ್ ಭಾಗಿಯಾಗುವರು.

ಅನಿಕೇತನ ಸೇವಾ ಟ್ರಸ್ಟ್ : ಟ್ರಸ್ಟ್ ನಿಂದ ಜ.26ರ ಸಂಜೆ.5.30ಕ್ಕೆ ಕುವೆಂಪುನಗರದ ಸೌಗಂಧಿಕ ಉದ್ಯಾನವನದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಸಂವಿಧಾನ ದಿನ ಹಾಗೂ ಕುವೆಂಪು ನಮನ ಏರ್ಪಡಿಸಿದೆ.

ಕನಕಗಿರಿಯ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಜಿ ಸಾನಿಧ್ಯ ವಹಿಸುವರು. ಸಚಿವೆ ಗೀತಾ ಮಹಾದೇವಪ್ರಸಾದ್ ಅಧ್ಯಕ್ಷತೆ, ಸಂವಿಧಾನ ತಜ್ಞ ಡಾ.ಸಿ.ಕೆ.ಎನ್.ರಾಜಾ ಉದ್ಘಾಟನೆ ನೆರವೇರಿಸುವರು. ಭಾಷಣಕಾರರಾಗಿ ಶಾಸಕ ವೈ.ಎಸ್.ವಿ.ದತ್ತ, ಪ್ರೊ.ಎಂ.ಕೃಷ್ಣೇಗೌಡ. ಮುಖ್ಯ ಅತಿಥಿಗಳಾಗಿ ಪ್ರತಾಪ್ ಸಿಂಹ, ಪೊಲೀಸ್ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್ ಮೊದಲಾದವರು ಭಾಗಿಯಾಗುವರು.

ಎಂ.ಕೆ.ಸೋಮಶೇಖರ್ ಅಭಿಮಾನಿಗಳ ಬಳಗ : ಇವರಿಂದ ಜ.26ರ ಸಂಜೆ 6ಕ್ಕೆ ಶ್ರೀರಾಂಪುರದ ಭ್ರಮರಾಂಭ ಕಲ್ಯಾಣ ಮಂಟಪದ ಎದುರಿನಲ್ಲಿ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆಯನ್ನು ಏರ್ಪಡಿಸಿದೆ.

ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ, ಸಚಿವೆ ಗೀತಾ ಮಹಾದೇವಪ್ರಸಾದ್ ಉದ್ಘಾಟಿಸುವರು.

(ಕೆ.ಎಂ.ಆರ್)

Leave a Reply

comments

Related Articles

error: