ದೇಶಪ್ರಮುಖ ಸುದ್ದಿ

ಶೂನ್ಯ ಬಾಕಿ ಜನಧನ್ ಖಾತೆಗಳಿಗೆ 10 ಸಾವಿರ ರು. ಜಮೆ: ಪ್ರತಿಪಕ್ಷಗಳ ವಿರುದ್ಧ ಮತ್ತೊಂದು ಸರ್ಜಿಕಲ್ ಸ್ಟ್ರೈಕ್!

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟು ರದ್ದು ಮಾಡುವ ಮೂಲಕ ಕಪ್ಪುಹಣದ ನಿರ್ಣಾಯಕ ಸಮರ ಸಾರಿದೆ. ಇದರ ಪ್ರತಿಫಲವೆನ್ನುವಂತೆ ಇದೀಗ ಜನ್‍ಧನ್‍ ಖಾತೆಗಳಲ್ಲಿ ಶೂನ್ಯ ಬಾಕಿ ಹೊಂದಿರುವ ಪ್ರತಿಯೊಂದು ಖಾತೆಗೂ 10 ಸಾವಿರ ರು. ಜಮೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನೋಟು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಅನುಷ್ಠಾನಗೊಳಿಸುವ ವೇಳೆ ಉಂಟಾದ ಅವ್ಯವಸ್ಥೆಯಿಂದ ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದ್ದರಿಂದ ಜನತೆ ಸರ್ಕಾರದ ವಿರುದ್ಧ ಟೀಕೆ-ಟಿಪ್ಪಣಿ ಮಾಡಿದ್ದರು. ಇದೀಗ ಬಡವರ ಖಾತೆಗಳಿಗೆ ಹಣ ವರ್ಗಾಯಿಸುವ ಕುರಿತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಜನತೆಯ ಮುಖದಲ್ಲಿ ಮಂದಹಾದ ಮೂಡಿದೆ.

ಜನ್‍ಧನ್‍ ಖಾತೆ ಯೋಜನೆ ಅಡಿಯಲ್ಲಿ ದೇಶಾದ್ಯಂತ 25 ಕೋಟಿ ಖಾತೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 5.8 ಕೋಟಿ ಖಾತೆಗಳು ಶೂನ್ಯ ಬಾಕಿ ಹೊಂದಿರುವ ಖಾತೆಗಳಾಗಿವೆ. ಸರ್ಕಾರದ ಯೋಜನೆ ಅನುಷ್ಠಾನಕ್ಕೆ ಬಂದ್ದದ್ದೇ ಆದರೆ 58 ಸಾವಿರ ಕೋಟಿ ರೂಗಳನ್ನು ಸರ್ಕಾರ ಈ ಖಾತೆಗಳಿಗೆ ಜಮೆ ಮಾಡಬೇಕಾಗುತ್ತದೆ.

ಇದು ದೊಡ್ಡ ಮೊತ್ತವೆಂದು ತೋರಿದರೂ ಆರ್ಥಿಕ ತಜ್ಞರ ಪ್ರಕಾರ ಹಳೇ ನೋಟು ನಿಷೇಧದಿಂದ ಸರ್ಕಾರಕ್ಕೆ 3 ಲಕ್ಷ ಕೋಟಿ ಆದಾಯ ಲಭಿಸಿದೆ. ಸರ್ಕಾರಕ್ಕೆ ಸಂದಾಯವಾದ ಈ ಹಣವನ್ನು ಇದೀಗ ರೈತರು ಮತ್ತು ಇತರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವರ್ಗಾಯಿಸುವ ನಿರ್ಧಾರದ ಮೂಲಕ ಕೇಂದ್ರ ಸರ್ಕಾರವು ನೋಟು ನಿಷೇಧದಿಂದ ಬಂದ ಲಾಭದಲ್ಲಿ ಬಡವರಿಗೆ ಪಾಲು ನೀಡಿದಂತಾಗಿದೆ.

ಇಷ್ಟು ಮಾತ್ರವಲ್ಲ, ಕಪ್ಪು ಹಣ ವಶಪಡಿಸಿಕೊಂಡು ಬಡವರಿಗೆ ಹಂಚುವ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಬಿಜೆಪಿ ಈಡೇರಿಸುವುದಿಲ್ಲ ಎಂದು ಸದಾಕಾಲ ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ಇದು ರಾಜಕೀಯವಾಗಿ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆ ಇದೆ.

ಸದ್ಯೋಭವಿಷ್ಯದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೆ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಚುನಾವಣೆಗಳು ಸಮೀಪಿಸುತ್ತಿವೆ. ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಜೊತೆಗೆ ಬಡವರು ಮತ್ತು ರೈತರ ಬೆಂಬಲ ಬಿಜೆಪಿಗೆ ಲಭಿಸಿದರೆ ಪ್ರತಿಪಕ್ಷಗಳು ಜನರ ಮನಗೆಲ್ಲಲು ತಿಣುಕಾಡಬೇಕಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Leave a Reply

comments

Related Articles

error: