ಕರ್ನಾಟಕ

ಚಾಮರಾಜನಗರದಲ್ಲಿ 69ನೇ ಗಣರಾಜ್ಯೋತ್ಸವ ಆಚರಣೆ

ಚಾಮರಾಜನಗರ,ಜ.26-ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಧ್ವಜಾರೋಹಣ ಮಾಡಿದರು.

ನಂತರ ಪೊಲೀಸರು ಆಕರ್ಷಕ ಪಥ ಸಂಚಲನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಈಗಾಗಲೇ ನಾಲ್ಕುವರೆ ವರ್ಷದಲ್ಲಿ ೮ ಕೋಟಿ ರೂ. ವೆಚ್ಚದಲ್ಲಿ ೭ ಪ್ರಾಥಮಿಕ ಆರೋಗ್ಯ ಕೇಂದ್ರ, ಎರಡು ತಾಲೂಕಿನಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಜನರಿಕ್ ಔಷಧಿ ಮಳಿಗೆ ಸ್ಥಾಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ರಾಮು, ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಜಿ.ಪಂ‌ ಸಿ‌ಇಓ ಹರೀಶ್ ಕುಮಾರ್, ಶಾಸಕ ಪುಟ್ಟರಂಗಶೆಟ್ಟಿ ಇತರರು ಹಾಜರಿದ್ದರು. (ವರದಿ-ಆರ್.ವಿ.ಎಸ್, ಎಂ.ಎನ್)

Leave a Reply

comments

Related Articles

error: