ಸುದ್ದಿ ಸಂಕ್ಷಿಪ್ತ

ಜ. 30 : ಜಿಲ್ಲಾ ಮಟ್ಟದ ಯುವಜನ ಮೇಳ ಆಯ್ಕೆ

ಮೈಸೂರು ಜ.26:-  ಮೈಸೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು, ತಾಲೂಕು ಯುವ ಒಕ್ಕೂಟ, ಡಾ. ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್, ಯಡದೊರೆ, ಭೀಮ್‍ರಾವ್ ಸ್ಟೋರ್ಟ್ಸ್ ಕ್ಲಬ್, ಕುರಿಸಿದ್ದನಹುಂಡಿ, ನವಚೇತನ ಸ್ಪೋರ್ಟ್ಸ್ ಕ್ಲಬ್, ತುಂಬಲ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಯುವಜನ ಮೇಳ ಆಯ್ಕೆಯನ್ನು ಟಿ.ನರಸೀಪುರ ತಾಲೂಕಿನ ಯಡದೊರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ 30 ರಂದು ಹಮ್ಮಿಕೊಳ್ಳಲಾಗಿದೆ.

ಮೈಸೂರು ಜಿಲ್ಲಾಮಟ್ಟದ ಯುವಜನ ಮೇಳ ಕಾರ್ಯಕ್ರಮದ ಆಯ್ಕೆಯಲ್ಲಿ ಭಾವಗೀತೆ, ಗೀಗೀ ಪದಗಳು, ಲಾವಣಿ, ಕೋಲಾಟ, ಡೊಳ್ಳು ಕುಣಿತ, ರಂಗಗೀತೆ, ಜಾನಪದ ನೃತ್ಯ, ಸೋಬಾನೆ ಪದ, ಭಜನೆ, ಯಕ್ಷಗಾನ, ಚರ್ಮವಾದ್ಯ ಮೇಳ, ಏಕಪಾತ್ರಾಭಿನಯ, ವೀರಗಾಸೆ/ಪುರವಂತಿಕೆ/ವೀರಭದ್ರನ ಕುಣಿತ, ಜೋಳ/ರಾಗಿ ಬೀಸುವ ಪದ, ಜನಪದ ಗೀತೆ, ದೊಡ್ಡಾಟ ಮತ್ತು ಸಣ್ಣಾಟ, ಇವುಗಳಲ್ಲಿ ಸ್ಪರ್ಧೆಗಳನ್ನು ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ. ಮೈಸೂರು ಜಿಲ್ಲಾಮಟ್ಟದ ಯುವಜನ ಮೇಳದ ಆಯ್ಕೆಯಲ್ಲಿ ಭಾಗವಹಿಸುವ ಮೈಸೂರು ಜಿಲ್ಲೆಯ ಸ್ಪರ್ಧಾಳುಗಳು ಜ. 30 ರಂದು ಬೆಳಿಗ್ಗೆ 9ಗಂಟೆಯ ಒಳಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣ ಯಡದೊರೆ, ಟಿ.ನರಸೀಪುರ ತಾಲೂಕು ಇಲ್ಲಿ ಯುವಜನ ಮೇಳದ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಪ್ರಯಾಣಭತ್ಯೆ ಮತ್ತು ಊಟೋಪಹಾರವನ್ನು ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಆಯ್ಕೆಯಾದವರು ಫೆ.1 ರಿಂದ 4 ರವರೆಗೆ ಸುದಾನ ವಸತಿಯುತ ಶಾಲೆ, ನೆಹರೂ ನಗರ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನಜರಾಬಾದ್, ಮೈಸೂರು ಅಥವಾ ದೂರವಾಣಿ ಸಂಖ್ಯೆ: 0821-2564179, ರೇವಂತ್ -8050318088, ನಿರಂಜನ್ -9964106392 ಹಾಗೂ ರಘುಪತಿ -7892158415 ನ್ನು ಸಂಪರ್ಕಿಸಬಹುದಾಗಿದೆ.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: