
ಮೈಸೂರು
ಮತೀಯ ಶಕ್ತಿಗಳ ವಿರುದ್ಧ ಹೋರಾಡಬೇಕಿದೆ: ವಿ.ಜಿ.ಕೆ. ನಾಯರ್
ಭೂತಾಕಾರವಾಗಿ ಬೆಳೆಯುತ್ತಿರುವ ಮತೀಯ ಶಕ್ತಿಗಳ ವಿರುದ್ಧ ಎಲ್ಲರೂ ಹೋರಾಡಬೇಕು ಎಂದು ಭಾರತೀಯ ಕಮ್ಯುನಿಷ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಜಿ.ಕೆ. ನಾಯರ್ ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಸಿಪಿಐ(ಎಂ) ಏರ್ಪಡಿಸಿದ್ದ ಅಕ್ಟೋಬರ್ ಕ್ರಾಂತಿ ನೂರು ಕುರಿತ ವಿಚಾರ ಸಂಕಿರಣದಲ್ಲಿ ವಿ.ಜಿ.ಕೆ. ನಾಯರ್ ಪಾಲ್ಗೊಂಡು ಮಾತನಾಡಿದರು.
ರೈತರು ಮತ್ತು ಕಾರ್ಮಿಕರು ಒಂದಾಗಿ ಚಳುವಳಿಯಲ್ಲಿ ಧುಮುಕಿದರೆ ಕ್ರಾಂತಿಯಾಗುತ್ತದೆ. ಪ್ರಭುತ್ವದ ಅಧಿಕಾರವನ್ನು ಕಿತ್ತುಕೊಳ್ಳುವುದೇ ಕ್ರಾಂತಿಯ ಉದ್ದೇಶ. ದುಡಿಯುವ ವರ್ಗವನ್ನು ಲೆನಿನ್ ಕ್ರಾಂತಿಯ ಮೂಲಕ ಅಧಿಕಾರ ವರ್ಗವನ್ನಾಗಿಸಿದ ಎಂದು ನೆನಪಿಸಿಕೊಂಡರು. ಮತೀಯವಾದ ಭೂತಾಕಾರವಾಗಿ ಬೆಳೆಯುತ್ತಿದ್ದರೂ ಜನ ಏನೂ ನಡೆಯುತ್ತಲೇ ಇಲ್ಲವೇನೋ ಎಂಬಂತಿದ್ದಾರೆ. ಮತೀಯ ಶಕ್ತಿಗಳ ವಿರುದ್ಧ ಎಲ್ಲರೂ ಹೋರಾಡಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಜನವೇದಿಕೆಯ ರಾಜ್ಯ ಸಂಚಾಲಕ ಡಾ.ವಿ. ಲಕ್ಷ್ಮಿನಾರಾಯಣ, ಎಡಪಂಥೀಯ ನಾಯಕರಾದ ಜಗನ್ನಾಥ, ಕೆ.ಬಸವರಾಜು, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.