ಮೈಸೂರು

ಕ್ಯಾಮರಾ –ಖಾಕಿ ಕಣ್ಗಾವಲಿನಲ್ಲಿ ಹನುಮಜಯಂತಿ ಮೆರವಣಿಗೆ : ಆಗಮಿಸಿದ ಹನುಮನ ಮೂರ್ತಿ

ಮೈಸೂರು,ಜ.27:- ಹುಣಸೂರಿನಲ್ಲಿ ಹನುಮ ಜಯಂತಿ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕ್ಯಾಮರಾ ಕಣ್ಗಾವಲಿದೆ.

ಹನುಮಜಯಂತಿ ವೇಳೆ ಗದ್ದಲ ಸೆರೆಹಿಡಿಯಲು 100ಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಲಾಗಿದ್ದು, ಮೆರವಣಿಗೆಯ ಪ್ರತಿಯೊಂದು ಚಲನ ವಲನಗಳನ್ನು ಸೆರೆ ಹಿಡಿಯಲು ಜಿಲ್ಲಾಧಿಕಾರಿ ಡಿ.ರಂದೀಪ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಗೆ  ಸೂಚನೆ ನೀಡಿದ್ದಾರೆ.

ಮಂಜುನಾಥನ ದೇವಸ್ಥಾನದಿಂದ ಹನುಮನ ಉತ್ಸವ ಮೂರ್ತಿ ಹೊರಟಿದ್ದು,ರಂಗನಾಥ ಬಡಾವಣೆ ಕಡೆ ತೆರಳುತ್ತಿದೆ. ಹುಣಸೂರಿನ ರಂಗನಾಥ ಬಡಾವಣೆಯಲ್ಲಿ ಹನುಮನ ಭಕ್ತರು ಜಮಾಯಿಸಲಿದ್ದು, ಮಧ್ಯಾಹ್ನ 3:30 ರವರೆಗೆ ಬಹಿರಂಗ ಮೆರವಣಿಗೆಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಹುಣಸೂರಿನಾದ್ಯಂತ ಖಾಕಿ ಕಣ್ಗಾವಲಿದೆ.

ಎರಡನೇ ಬಾರಿಗೆ ಹುಣಸೂರಿನಲ್ಲಿ ಹನುಮ ಜಯಂತಿಗೆ ಕ್ಷಣಗಣನೆ ನಡೆದಿದ್ದು, ಹುಣಸೂರಿನ ರಂಗನಾಥ ಬಡಾವಣೆಗೆ 11 ಅಡಿ ಹನುಮನ ಮೂರ್ತಿ ಆಗಮಿಸಿದೆ. ರಂಗನಾಥ ಬಡಾವಣೆಯಲ್ಲಿ ಪೊಲೀಸ್ ಭದ್ರತೆಯೊದಗಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್, ಎಸ್ಪಿ ರವಿ ಡಿ ಚೆನ್ನಣ್ಣನವರ್, ಅಡಿಶನಲ್ ಎಸ್ಪಿ ರುದ್ರಮುನಿ ಸ್ಥಳಕ್ಕೆ ತೆರಳಿ ಭದ್ರತೆಯನ್ನು ಪರಿಶೀಲಿಸಿದ್ದಾರೆ.

ಕಳೆದೆರಡು ವರ್ಷಗಳ ಹಿಂದೆ ಹನುಮ ಜಯಂತಿಯ ವೇಳೆ ಗಲಾಟೆ ನಡೆದ ಹಿನ್ನೆಲೆಯಲ್ಲಿ ಡಿ.2ರಂದು ನಡೆಯಬೇಕಿದ್ದ ಹನುಮ ಜಯಂತಿಗೆ ಭಾರಿ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ಸಣ್ಣಪುಟ್ಟ ವಿಚಾರಗಳಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಹನುಮ ಜಯಂತಿ ಮೆರವಣಿಗೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಆ ದಿನ ನಡೆಯಬೇಕಿದ್ದ ಮೆರವಣಿಗೆ ಅಪೂರ್ಣಗೊಂಡ ಕಾರಣ ಇಂದು ನಡೆಯುತ್ತಿದೆ. ಮೈಸೂರು ಜಿಲ್ಲಾಡಳಿತದಿಂದ ಹಲವು ನಿಬಂಧನೆಗಳೊಂದಿಗೆ ಇಂದು ಮತ್ತೆ ಮೆರವಣಿಗೆ ನಡೆಯುತ್ತಿದ್ದು, ಜಿಲ್ಲಾಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದಲೇ ಹನುಮಜಯಂತಿ ಆಚರಣೆ ಮಾಡಲಾಗುತ್ತಿದೆ. ಹೊಸ 5 ನಿಬಂಧನೆಗಳನ್ನು ವಿಧಿಸಿ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: