ಮೈಸೂರು

ಆರೋಪ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ: ರಾಮದಾಸ್

500 ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ನಗಣ್ಯ ಮಾಡುವ ವಿಷಯ ನನಗೆ ಮೊದಲೇ ತಿಳಿದಿತ್ತು ಎಂಬ ಆರೋಪವನ್ನು ಶಾಸಕ ಸೋಮಶೇಖರ್ ಸಾಬೀತುಪಡಿಸಿದರೆ ಪೊಲೀಸರಿಗೆ ಶರಣಾಗಿ, ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಾಮದಾಸ್ ಅವರು ಕಪ್ಪು ಹಣವನ್ನು ಹೊರತರಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮ ಸ್ವಾಗತಾರ್ಹ ಎಂದಿದ್ದಾರಲ್ಲದೇ, ನಾನು ನವೆಂಬರ್ 9 ರಂದು ಮಾಧ್ಯಮಗಳಿಗೆ ಹೇಳಿರುವ ಹೇಳಿಕೆಯನ್ನು ತಿರುಚಲಾಗಿದೆ. ಕಪ್ಪುಹಣವನ್ನು ಇಟ್ಟುಕೊಂಡಿರುವವರು ಮಾತ್ರ ಇಂಥಹ ಹೇಳಿಕೆಯನ್ನು ನೀಡಲು ಸಾಧ್ಯ. ನನಗೆ ದೇಶದ ಸುರಕ್ಷತೆ ಹಾಗೂ ಭದ್ರತೆಯ ಕುರಿತು ಗೌರವವಿದೆ. ಹೀಗಿದ್ದರೂ ನಾನು ಹೇಳಿರದ ಹೇಳಿಕೆಯನ್ನು ನಾನೇ ಹೇಳಿದ್ದೆ ಎಂದು ಸಾಬೀತುಪಡಿಸಲು ಶಾಸಕರು ಹೊರಟಿರುವುದು ದುರಂತದ ವಿಚಾರ ಎಂದರು.

ನಾನು ಆರ್ ಬಿಐ ನೌಕರರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದೇನೆ. ಯಾಕೆಂದರೆ ಅವರು ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸುತ್ತಾರೆ. ಆದರೆ ನೋಟು ಮುದ್ರಣಕ್ಕಾಗಿ ಹೆಚ್ಚುವರಿ ಒಂದು ದಿನ ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನು ಶ್ಲಾಘಿಸಿದ್ದೇನೆ. ಆದರೆ  ನಾನು ನೋಟುಗಳು ರದ್ದಾಗುವ ವಿಚಾರದ ಕುರಿತು ಎಲ್ಲಿಯೂ ಹೇಳಿಲ್ಲ. ನೋಟು ರದ್ದಾಗುವ ವಿಚಾರ ನನಗೆ ತಿಳಿದೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

comments

Related Articles

error: