
ಪ್ರಮುಖ ಸುದ್ದಿಮೈಸೂರು
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕರಾಟೆ ಅವಶ್ಯ: ಡಾ. ಧರಣಿದೇವಿ ಮಾಲಗತ್ತಿ
ಪ್ರತಿಯೊಬ್ಬರಿಗೂ ಕರಾಟೆ ಅಗತ್ಯ. ಅದರಲ್ಲೂ ಯುವಕರು ಸ್ವಯಂ ಹಾಗೂ ಸಮಾಜ ರಕ್ಷಣೆಗಾಗಿ ಕರಾಟೆ ಕಲಿಯುವುದು ಪ್ರಸ್ತುತ ದಿನಮಾನಗಳಲ್ಲಿ ಅತಿ ಅವಶ್ಯ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ತಿಳಿಸಿದರು.
ಅವರು, ಭಾನುವಾರ, ಜೆಪಿ ನಗರದ ವಾಸವಿ ಪ್ರಾರ್ಥನಾ ಮಂದಿರದಲ್ಲಿ ಸ್ಟೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಫ್ ಮೈಸೂರು ಆಯೋಜಿಸಿದ್ದ “ಇಂಟರ್ ಡೋ ಜೋ ಶಿಟೋ ರಿಯೋ ಕರಾಟೆ ಚಾಂಪಿಯನ್ ಶಿಪ್”ಅನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚಿತ್ತಿರುವ ದೌರ್ಜನ್ಯವನ್ನು ತಡೆಯಲು ಹಾಗೂ ಅಪಾಯಕಾರಿ ಸಂದರ್ಭದಲ್ಲಿ ಸ್ವಯಂ ರಕ್ಷಣೆಗೆ ಕರಾಟೆ ಅನುಕೂಲವಾಗಿರುವುದು. ಅಲ್ಲದೆ, ಮಕ್ಕಳ ದೈಹಿಕ ಹಾಗು ಮಾನಸಿಕ ಸರ್ವತೋಮುಖ ಅಭಿವೃದ್ಧಿಯೂ ಕರಾಟೆಯಿಂದ ಸಾಧ್ಯವಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹೆಚ್.ವಿ. ರಾಜೀವ್, ಎನ್.ಎ.ಕೆ. ಕಾರ್ಯದರ್ಶಿ ಆರ್. ಗಣೇಶ್, ನೂರ್ ಮಹಮ್ಮದ್ ಅಲಿ, ಶಿವಕುಮಾರ್ ಕಾಡುಮನೆ, ನಾಗರಾಜು ಹಾಗೂ ಇತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಕರಾಟೆಪಟುಗಳು ಭಾಗವಹಿಸಿದ್ದರು.