ಮೈಸೂರು

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗಳ ಬಂಧನ

ಅಪ್ರಾಪ್ತೆಯನ್ನು ನಂಬಿಸಿದ ಸ್ನೇಹಿತ ಮತ್ತು ಇತರೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕಿಯನ್ನು ನ.14 ರಂದು ಶಾಂತಿ ನಗರದ ಪಾರ್ಕ್‍ಗೆ ಮಾತನಾಡಬೇಕೆಂದು ಕರೆಸಿಕೊಂಡ ನದೀಂ ಪಾಷಾ, ಅಕೆಯನ್ನು ತನ್ನ ಸ್ಕೂಟರ್‍ನಲ್ಲಿ ಸ್ನೇಹಿತನ ಮನೆಯ ಕಾರ್ಯಕ್ರಮವಿರುವುದಾಗಿ ನಂಬಿಸಿ ಶ್ರೀರಂಗಪಟ್ಟದ ಡಾಬಾಕ್ಕೆ ಕರೆದುಕೊಂಡು ಹೋಗಿದ್ದಾನೆ ಆದಾಗಲೇ ಕೊಠಡಿಯೊಳಗೆ ಸೇರಿದ್ದ ನದೀಂ ಪಾಷಾ ಸ್ನೇಹಿತರಾದ ಉದಯಗಿರಿಯ ತನ್ವೀರ್ ಪಾಷಾ, ಸದ್ದಾಮ್ ಷರೀಫ್ ಅವರುಗಳು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ನದೀಂ ಪಾಷಾ ಬಾಲಕಿಯ ಕುಟುಂಬಕ್ಕೆ ಪರಿಚಯಸ್ಥ ಎನ್ನಲಾಗಿದೆ.

ಈ ಬಗ್ಗೆ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಸಿಕೆಯೊಡ್ಡಿದ್ದಾರೆ. ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಪೋಷಕರ ಬಳಿ ದುರ್ಘಟನೆ ಬಗ್ಗೆ ತಿಳಿಸಿದ್ದಾಳೆ. ಪೋಷಕರು ಪ್ರಕರಣವನ್ನು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ಪೊಲೀಸರು ಆರೋಪಿಗಳಾದ ತನ್ವೀರ್ ಪಾಷಾ, ಸದ್ದಾಮ್ ಷರೀಫ್ ಹಾಗೂ ನದೀಮ್ ಪಾಷಾರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

comments

Related Articles

error: