ಸುದ್ದಿ ಸಂಕ್ಷಿಪ್ತ

ಜ.29,30 ಗ್ರಾಮೀಣ ಸಾಂಸ್ಕೃತಿಕ ರಂಗ ವೈಭವ

ಮೈಸೂರು, ಜ.27 : ಮೈಸೂರು ನಗರ ಜಿಲ್ಲಾ ಕಲಾವಿದರ ಕೇಂದ್ರ ಸಮಿತಿಯ 8ನೇ ವಾರ್ಷಿಕೋತ್ಸವ ‘ಗ್ರಾಮೀಣ ಸಾಂಸ್ಕೃತಿಕ ರಂಗ ವೈಭವ’ವನ್ನು ಜ.29 ಮತ್ತು 30ರಂದು ಪುರಭವನದಲ್ಲಿ ಆಯೋಜಿಸಿದೆ.

ಅಂದು ಬೆಳಗ್ಗೆ 10.30ಕ್ಕೆ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಶಾಸಕ ಎಂ.ಕೆ.ಸೋಮಶೇಖರ್ ಅವರಿಂದ ಗ್ರಾಮೀಣ ನಾಟಕೋತ್ಸವದ ಉದ್ಘಾಟನೆ, ವೆಂಗಿಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ ಅಧ್ಯಕ್ಷತೆ. ನಂತರ ಪಂಚವಟಿ ರಾಮಾಯಣ, ಚಂದ್ರಮನ ಪರಿಭವ, ಕೃಷ್ಣನ ಶಯನಾಗೃಹ, ಗದಾಯುದ್ಧ ಪೌರಾಣಿಕ ನಾಟಕಗಳ ಪ್ರದರ್ಶನ.

ಜ.30ರ ಬೆಳಗ್ಗೆ 10ಕ್ಕೆ ಎಂ.ಎಸ್.ಜಾನಕಿರಾಮ್ ಮತ್ತು ವೃಂದದಿಂದ ಮ್ಯಾಂಡಲೀನ್ ವಾದನ, ಮಲ್ಲಿಗೆ ಕಲಾವಿದರಿಂದ ಸುಗಮ ಸಂಗೀತ, ಯಕ್ಷಣಿ ಪ್ರದರ್ಶನ, ರಂಗಗೀತೆ ಕಾರ್ಯಕ್ರಮ ನಡೆಯುವುದು. ನಂತರ ಸಮಾರೋಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಡಾ.ಕೆ.ರಘುರಾಂ ವಾಜಪೇಯಿ ಮೊದಲಾದ ಗಣ್ಯರು ಭಾಗವಹಿಸುವರು.

ಸಂಜೆ 4 ಗಂಟೆಗೆ ಮುದುಕನ ಮದುವೆ, ಸಾಮಾಜಿಕ ಹಾಸ್ಯ ನಾಟಕ. (ಕೆ.ಎಂ.ಆರ್)

Leave a Reply

comments

Related Articles

error: