ಮೈಸೂರು

ಎತ್ತಿನ ಗಾಡಿಗಳ ಓಟದ ಸ್ಪರ್ಧೆ : ಪ್ರಥಮ ಬಹುಮಾನ ಮುಡಿಗೇರಿಸಿಕೊಂಡ ಕಾರ್ತಿಕ್ ಕಿರಂಗೂರು ಎತ್ತುಗಳು

ಮೈಸೂರು(ಬೈಲಕುಪ್ಪೆ)ಜ.28 :- ತಮ್ಮ ಎತ್ತುಗಳನ್ನು ಅಲಂಕರಿಸಿಕೊಂಡು ಸ್ಪರ್ಧಾಳುಗಳು ಕ್ರೀಡಾಂಗಣದತ್ತ ಜಮಾಯಿಸುತ್ತಿದ್ದರೆ, ಅದನ್ನು ನೋಡುವ ಕುತೂಹಲದಿಂದ ತಾಲೂಕಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಸೇರಿದ್ದರು.

ಸ್ಪರ್ಧೆ ಶುರುವಾಗುತ್ತಿದ್ದಂತೆ ಎತ್ತಿನ ಗಾಡಿಗಳು ಗೆಲ್ಲುವ ತವಕದಲ್ಲಿ ವೇಗವಾಗಿ ಓಡುತ್ತಿದ್ದರೆ ಪ್ರೇಕ್ಷಕರು ಕೇಕೆ ಶಿಳ್ಳೆ ಮೂಲಕ ಪ್ರೋತ್ಸಾಹ ನೀಡುತ್ತಿದ್ದ ದೃಶ್ಯ ಆಕರ್ಷಕವಾಗಿತ್ತು. ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಹಸು ವ್ಯಾಪಾರಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಗ್ರಾಮೀಣ ಕ್ರೀಡೊತ್ಸವದಲ್ಲಿ ಇವೆಲ್ಲ ಕಂಡು ಬಂತು. ಎತ್ತಿನ ಗಾಡಿಗಳ ಓಟದ ಸ್ಪರ್ಧೆ ಅತ್ಯಂತ ಕುತೂಹಲಕರವಾಗಿತ್ತು. ಗಾಡಿಗಳ ಓಟಕ್ಕೆ ಧೂಳು ಹಾರುತ್ತಿದ್ದರೆ, ಇತ್ತ ಜನರ ಕೇಕೆ ಮುಗಿಲು ಮುಟ್ಟುವಂತಿತ್ತು. ಸ್ಪರ್ಧಾಳುಗಳು ತಮ್ಮ ಎತ್ತುಗಳ ಸಾಮರ್ಥ್ಯಕ್ಕೆ ತಕ್ಕಂತೆ ಗಾಡಿ ಓಡಿಸುತ್ತಿದ್ದರೆ, ಪ್ರೇಕ್ಷಕರಿಗೆ ಇದು ಸಂಭ್ರಮವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲಕುಪ್ಪೆ  ಗ್ರಾ ಪಂ ಮಾಜಿ ಅಧ್ಯಕ್ಷ ಎಂ.ಬಿ. ಮಂಜುನಾಥ್ ಆಧುನಿಕತೆಯ ನೆಪದಲ್ಲಿ ಈಗ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದರೊಂದಿಗೆ ದೇಶದ ಗ್ರಾಮೀಣ ಸಂಸ್ಕೃತಿ ಆಚರಣೆಯೂ ದೂರವಾಗುತ್ತಿರುವುದು ಆತಂಕದ ಸಂಗತಿ ಎಂದು ಹೇಳಿ, ಗ್ರಾಮೀಣ ಬದುಕಿಗೆ ಹೊಸ ಚೈತನ್ಯ ತುಂಬುವ ಅಗತ್ಯ ಇದೆ ಎಂದು ಹೇಳಿದರು

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾರ್ತಿಕ್ ಕಿರಂಗೂರು ಎತ್ತುಗಳು 50,000 ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಹಸುವಿನ ಬಳಗ ಬೈಲಕುಪ್ಪೆ , ತೃತೀಯಾ ಬಹುಮಾನವನ್ನು ಮೈಸೂರು ತಾಲೂಕಿನ ಸಿದ್ದಲಿಂಗಪುರ ಮುರುಳಿ, ನಾಲ್ಕನೆಯ ಬಹುಮಾನವನ್ನು ನಿಹಾಲ್ ರಾಜ್ ತಿರುಮಾಲಪುರ ಎತ್ತಿನ ಜೋಡಿಗಳು ಪಡೆದುಕೊಂಡವು.

ಕಾರ್ಯಕ್ರಮದಲ್ಲಿ ಮಾಜಿ ತಾ ಪಂ ಸದಸ್ಯ ನವಿಲೂರ್ ಮಹದೇವ್, ಮಾಜಿ ಗ್ರಾಪಂ ಅಧ್ಯಕ್ಷ ಕೆ. ವಿಜಯ್‍ಕುಮಾರ್, ಗ್ರಾಪಂ ಸದಸ್ಯ, ದಿನೇಶ್ ಕೆಬಲ್, ಮಂಜೇಶ್, ಮಾಜಿ ಸದಸ್ಯ ಮಹದೇವ್, ಹಿರಿಯ ಗ್ರಾಮಸ್ಥ, ರಾಮಣ್ಣ, ನಿವೃತ್ತ ಶಿಕ್ಷಕ ಶಾಸ್ತ್ರಿ, ರಾಮಕೃಷ್ಣ, ಹಸು ವ್ಯಾಪರಿಗಳ ಬಳಗದ ಶರತ್, ನಾಗೇಶ್, ರಾಜೇಶ್, ಮಂಜುನಾಥ್, ಶಿವ, ಇಮ್ರಾನ್, ವಿಠಲ, ಶ್ರೀನಿವಾಸ್, ಗ್ರಾಮಸ್ಥರಾದ ಸುರೇಶ್, ಶ್ಯಾಮ್, ರುದ್ರಸ್ವಾಮಿ, ಇತರರು ಇದ್ದರು. (ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: