ಮೈಸೂರು

ಮೈಸೂರಿನ ಯುವಕನ ಪತ್ರಕ್ಕೆ ಸ್ಪಂದಿಸಿದ ಮೋದಿ : ಅಭಿನಂದಿಸಿದ ಮಾಜಿ ಸಚಿವ ಎಸ್.ಎ.ರಾಮದಾಸ್

ಮೈಸೂರು,ಜ.28:- ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಯುವಕ ದರ್ಶನ ಅವರ ಪತ್ರಕ್ಕೆ ಸ್ಪಂದಿಸಿ ತಮ್ಮ   ಮನ್ ಕಿ ಬಾತ್ ನಲ್ಲಿ  ಮತ್ತು  ತಮ್ಮ  ಫೇಸ್ ಬುಕ್ ಪೇಜ್ ನಲ್ಲಿಯೂ  ಸ್ಪಂದಿಸಿರುವುದಕ್ಕೆ ಮಾಜಿ ಸಚಿವ ಎಸ್.ಎ.ರಾಮದಾಸ್ ಅಭಿನಂದನೆ ಸಲ್ಲಿಸಿದ್ದಾರೆ.

ಅಂದು ವೈದ್ಯಕೀಯ ಶಿಕ್ಷಣ  ಸಚಿವರಾಗಿದ್ದಾಗ ರಾಜ್ಯದಲ್ಲಿ ಒಟ್ಟು 8  ಕೇಂದ್ರಗಳನ್ನು ಪ್ರಾರಂಭಿಸಲಾಗಿತ್ತು. ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಒಂದು ಕೇಂದ್ರವನ್ನು ಜಾವಗಲ್ ಶ್ರೀನಾಥ್ ರವರಿಂದ ಪ್ರಾರಂಭಿಸಲಾಗಿತ್ತು. ಇದುವರೆಗೂ ಮೈಸೂರಿನ ಜೆನೆರಿಕ್ ಮೆಡಿಸಿನ್  ಕೇಂದ್ರದಲ್ಲಿ 14 ಲಕ್ಷಕ್ಕಿಂತ ಹೆಚ್ಚು ಜನರು ಸದುಪಯೋಗ ಪಡೆದಿದ್ದು, 11  ಕೋಟಿ ರೂಪಾಯಿಗಳಷ್ಟು ಔಷಧಿಗಳನ್ನು ಖರೀದಿಸಿರುತ್ತಾರೆ.    ಜೆನೆರಿಕ್ ಮೆಡಿಸಿನ್ ಯೋಜನೆಯಿಂದ  ಜನಸಾಮಾನ್ಯರಿಗೆ ಬಹಳ ಉಪಯೋಗವಾಗಿರುವುದರಿಂದ ಇದನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಕನಸು ನನ್ನದಾಗಿತ್ತು. ಇದಕ್ಕೆ ಸ್ಪೂರ್ತಿಯಾಗುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ  ಬಹುಉಪಯೋಗಿ ಯೋಜನೆಗಳಲ್ಲಿ ಒಂದಾದ  ಪ್ರಧಾನ ಮಂತ್ರಿ ಭಾರತೀಯ  ಜನೌಷಧಿ  ಪರಿಯೋಜನೆಯಡಿಯಲ್ಲಿ ಜನೌಷಧಿ ಕೇಂದ್ರಗಳನ್ನು  ಇದುವರೆಗೂ  ದೇಶದಲ್ಲಿ 3100 ಕ್ಕೂ ಹೆಚ್ಚು  , ಕರ್ನಾಟಕದಲ್ಲಿ 240  ಕ್ಕೂ ಹೆಚ್ಚು   ಹಾಗೂ . ಮೈಸೂರು ಜಿಲ್ಲೆಯಲ್ಲಿ  ಇದುವರೆಗೂ  31  ಕೇಂದ್ರಗಳು ಸ್ಥಾಪಿಸಲಾಗಿದ್ದು ಜನರ  ಸೇವೆಯಲ್ಲಿ ತೊಡಗಿರುತ್ತವೆ. ಸೇವಾ ಮನೋಭಾವನೆ ಹಾಗೂ ಆಸಕ್ತಿಯುಳ್ಳ ಯುವಕ ಯುವತಿಯರಿಗೆ  ಹಲವಾರು ಕಾರ್ಯಗಾರಗಳನ್ನು ಏರ್ಪಡಿಸಿ ಅವರಿಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ  ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಒದಗಿಸಿ  ಹಾಗೂ ಅವರನ್ನು ಹುರಿದುಂಬಿಸಿ  ಇದುವರೆಗೂ  27 ಕೇಂದ್ರಗಳು  ಮೈಸೂರಿನಲ್ಲಿ ಹಾಗೂ ರಾಜ್ಯದಲ್ಲಿ 51  ಕೇಂದ್ರಗಳು ಪ್ರಾರಂಭವಾಗಿ ಜನಸಾಮಾನ್ಯರಿಗೆ  ಸೇವೆ ನೀಡುವುದರಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇದಕ್ಕೆ ಕೇಂದ್ರ ಸರ್ಕಾರವು ಮೆಚುಗೆವ್ಯಕ್ತಪಡಿಸಿ, ಪ್ರಾಯೋಗಿಕವಾಗಿ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಗಳನ್ನು ಕೊಡಬೇಕೆಂದು ತಿಳಿಸಿದ್ದರು. ಈ ವಿಷಯವಾಗಿ ಎಲ್ಲ ದಾಖಲೆ ಸಮೇತ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದು ಇದಕ್ಕೆ ಸೂಕ್ತವಾಗಿ ಕೇಂದ್ರ ಸರ್ಕಾರ ಸ್ಪಂದಿಸುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತ ಪಡಿಸಿರುವ ವಿಷಯವೂ ಇನ್ನಷ್ಟು ಸ್ಪೂರ್ತಿದಾಯಕವಾಗಿದ್ದು, ಕಡಿಮೆ ದರದಲ್ಲಿ ಅತ್ಯುತ್ತಮ ಗುಣಮಟ್ಟವುಳ್ಳ ಪ್ರತಿಯೊಂದು ಕುಟುಂಬಕ್ಕೂ ಅವಶ್ಯಕವಾಗಿರುವ ಔಷಧಿಗಳನ್ನು ಒದಗಿಸಲು ಕಾರಣಕರ್ತರಾಗಿರುವ ಪ್ರಧಾನ ಮಂತ್ರಿಗಳಿಗೆ  ಈ ಮೂಲಕ  ಧನ್ಯವಾದಗಳನ್ನು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: