
ಸರ್ಕಾರ ಬಾಕಿ ಉಳಿಸಿಕೊಂಡಿರುವ ಅನ್ನಭಾಗ್ಯ ಹಾಗೂ ಪಡಿತರ ಸರಬರಾಜು ಗುತ್ತಿಗೆ ಪಡಿದಿದ್ದ ಲಾರಿ ನೌಕರರು ಸಾಗಣಿಕ ವೆಚ್ಚವನ್ನು ಪಾವತಿಸುವಂತೆ ಆಗ್ರಹಿಸಿ ನ.5 ರಿಂದ ನಡೆಸುತ್ತಿದ್ದ ಮುಷ್ಕರಕ್ಕೆ ತಾತ್ಕಾಲಿಕವಾಗಿ ವಿರಾಮ ಘೋಷಿಸಿ ಸೇವೆಗೆ ಹಿಂತಿರುಗಿದ್ದಾರೆ.
100 ಕೋಟಿಗೂ ಅಧಿಕ ಮೊತ್ತವನ್ನು ಸರ್ಕಾರ ಪಾವತಿಸಬೇಕಿದೆ. ಮುಷ್ಕರದಲ್ಲಿ ಸುಮಾರು ಆರು ಸಾವಿರ ಲಾರಿಗಳು ಪಾಲ್ಗೊಂಡಿದ್ದವು.
ಶ್ರೀಘ್ರದಲ್ಲಿಯೇ ಮೊತ್ತವನ್ನು ಪಾವತಿಸಿ, ಹೊಸ ಟೆಂಡರ್ ಕರೆಯಲಾಗುವುದು ಎಂದು ಸಚಿವ ಯು.ಟಿ. ಖಾದರ್ ಅವರು ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆದಿದ್ದೇವೆ. ಕೇಂದ್ರ ಸರ್ಕಾರವು 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದರಿಂದ ಬಡವರಿಗೆ ಅದರಲ್ಲೂ ಅನ್ನಭಾಗ್ಯ ಫಲಾನುಭವಿಗಳಾದ ಸಮಸ್ಯೆಯನ್ನು ಮನಗಂಡು ಮುಷ್ಕರ ಸ್ಥಗಿತಗೊಳಿಸಲಾಗಿದೆ ಎಂದು ಅಖಿಲ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದ್ದಾರೆ.