ಮನರಂಜನೆ

ಗೆಲುವಿನ ಸಂಭ್ರಮದಲ್ಲಿರುವ ಚಂದನ್ ಶೆಟ್ಟಿಗೆ ಅಮ್ಮನಿಂದ ಸರ್ಪೈಸ್ ಗಿಫ್ಟ್

ಬೆಂಗಳೂರು,ಜ.29: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದ್ದು, ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಇದೀಗ ಬಿಗ್ ಬಾಸ್ ಗೆದ್ದು ಬಂದ ಮಗನಿಗಾಗಿ ಅಮ್ಮ ಮುದ್ದಾದ ಉಡುಗೊರೆಯನ್ನು ನೀಡಿದ್ದಾರೆ.

ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದಿದ್ದ ಚಂದನ್ ಶೆಟ್ಟಿಗೆ, ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ.

ಚಂದನ್ ಶೆಟ್ಟಿ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಬಹಳ ಪ್ರೀತಿ. ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕಿಕೊಳ್ಳೋಕೆ ಬಹಳ ಇಷ್ಟ ಪಡುತ್ತಾರೆ. ಆದ್ದರಿಂದ  ಅಮ್ಮ ನಾಯಿಮರಿಯನ್ನು ಉಡುಗೊರೆ ನೀಡುವ ಮೂಲಕ ಚಂದನ್ ಗೆ ಸರ್ಪೈಸ್ ಗಿಫ್ಟ್ ಆಗಿ ರ್ಶಿಜ್ಲಾ ಬ್ರೀಡ್ ಎಂಬ ಚೈನಾ ನಾಯಿಮರಿಯನ್ನು ನೀಡಿದ್ದಾರೆ. ಈ ನಾಯಿಮರಿಗೆ `ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರ ಆಸೆಯಾಗಿತ್ತು. ಚಂದನ್ ಅವರ ಆಸೆಯ ಪ್ರಕಾರವೇ ಆ ನಾಯಿಮರಿಗೆ `ಆಪಲ್’ ಎಂದು ಹೆಸರಿಡಲಾಗಿದೆ. (ವರದಿ: ಪಿ. ಎಸ್ )

Leave a Reply

comments

Related Articles

error: