ಕರ್ನಾಟಕ

ಡೆತ್‍ನೋಟ್ ಬರೆದಿಟ್ಟು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು,ಜ.29: ಡಿಪ್ಲೋಮಾ ಇನ್ ನರ್ಸಿಂಗ್ ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಮೌನಿಷಿ ರಾಂ (20) ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿ. ಅಂಬಿಕಾ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಮೌನಿಷಿ ಪಶ್ಚಿಮ ಬಂಗಾಳ ಮೂಲದ ಹುಡುಗನನ್ನೇ ಪ್ರೀತಿಸುತ್ತಿದ್ದಳು. ವಿಚಾರ ಅವರ ಪೋಷಕರಿಗೂ ತಿಳಿದಿತ್ತು. ಆದರೆ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳಿಂದ ವಿಚಾರದ ಬಗ್ಗೆ ಮನೆಯರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಳು. ಆದರೆ ಶನಿವಾರ ರಾತ್ರಿ ಮನನೊಂದ ಮೌನಿಷಿ ಮನನೊಂದು ಡೆತ್ನೋಟ್ ಬರೆದಿಟ್ಟು ಸೀಲಿಂಗ್ ಫ್ಯಾನ್ ಹುಕ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನಮ್ಮ ಮನೆಯಲ್ಲಿ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮಿಸ್ ಯು ಪಪ್ಪ, ಮಿಸ್ ಯು ಮಮ್ಮಿ ಎಂದು ಡೆತ್ನೋಟಿನಲ್ಲಿ ಬರೆದಿದ್ದಾಳೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಪಿ. ಎಸ್ )

Leave a Reply

comments

Related Articles

error: