ಮೈಸೂರು

ಪರಿಶಿಷ್ಟ ಜಾತಿ/ವರ್ಗದ ನೌಕರರ ಮೇಲಿನ ದೌರ್ಜನ್ಯಕ್ಕೆ ಖಂಡನೆ : ಪ್ರತಿಭಟನೆ

ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪರಿಶಿಷ್ಟಜಾತಿ ಮತ್ತು ವರ್ಗದ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮೈಸೂರು ವಿಭಾಗೀಯ ರಾಜ್ಯ ಮತ್ತು ಕೇಂದ್ರ ಸರ್ಕಾರಿ, ಅರೆ ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಧಿಕಾರಿಗಳ ನೌಕರರ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಮೃಗಾಲಯದ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮೃಗಾಲಯದ ಉಪಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಕ್ಷುಲ್ಲಕ ಕಾರಣದ ನೆಪವೊಡ್ಡಿ ಪರಿಶಿಷ್ಟ ಜಾತಿಯ ಡಿ-ದರ್ಜೆಯ ನೌಕರರನ್ನು ಅಮಾನತುಗೊಳಿಸಿದ್ದಾರೆ. ಇದು ಸರಿಯಲ್ಲ.  ಅಟೆಂಡರ್ ಚಾಮರಾಜು, ಜೂ. ಅಟೆಂಡರ್ ಕಾಂತರಾಜು, ಗುತ್ತಿಗೆನೌಕರರಾದ ಬಸವರಾಜು ಮತ್ತು ಪ್ರದೀಪ್ ಅವರು ಮೇಲಧಿಕಾರಿಗಳನ್ನು ಭೇಟಿ ಮಾಡಿದರೆನ್ನುವ ಒಂದೇ ಕಾರಣಕ್ಕಾಗಿ ಅವರಿಗೆ ಕಿರುಕುಳ ನೀಡಿ ಅಮಾನತು ಮಾಡಿ ಆದೇಶ ಹೊರಡಿಸಿರುವುದು ಖಂಡನೀಯ ಎಂದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಯೊಬ್ಬರು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ನಡೆಸಿದಂತಾಗಿದೆ. ಕ್ಷುಲ್ಲಕ ಕಾರಣ ನೀಡಿ ನಿವೃತ್ತಿಗೆ ಇನ್ನು ಕೇವಲ ಮೂರು ತಿಂಗಳಿರುವ ಕಾಂತರಾಜು ಹಾಗೂ ಅಮಾಯಕರಾದ ಚಾಮರಾಜು ಇವರೆಲ್ಲರ ಅಮಾನತನ್ನು ರದ್ದುಪಡಿಸಿ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ. ಪರಿಶಿಷ್ಟ ವರ್ಗದ ನೌಕರರ ಅಧಿಕಾರಿಗಳ ನೌಕರರ ಪರಿಷತ್ ನ ಗೌರವಾಧ್ಯಕ್ಷ ಶಾಂತರಾಜು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: