
ಮೈಸೂರು
ವರ್ಷಾಯೋಗ ಚಾತುರ್ಮಾಸ ವ್ರತ ಸಮಾರೋಪ
ಮೈಸೂರಿನ ದಿಗಂಬರ ಜೈನ ಸಮಾಜ ಮತ್ತು ಪದ್ಮಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ವರ್ಷಾಯೋಗ ಚಾತುರ್ಮಾಸ ವ್ರತ ಸಮಾರೋಪ ಸಮಾರಂಭ ಮತ್ತು ಪಿಂಛಿ ಪರಿವರ್ತನ ಕಾರ್ಯಕ್ರಮ ನಡೆಯಿತು.
ಮೈಸೂರಿನ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್.ಜೈನ್ ಬೋರ್ಡಿಂಗ್ ಹೊಂನಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಎಂ.ಎಲ್.ಜೈನ್ ಬೋರ್ಡಿಂಗ್ ಹೊಂನಿಂದ ಅಶೋಕ ರಸ್ತೆ, ಮಹಾವೀರ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮುನಿಶ್ರೀಗಳು ಪ್ರವಚನ ನಡೆಸಿಕೊಟ್ಟರು. ಈ ಸಂದರ್ಭ ನೂರಾರು ಭಕ್ತರು ಪಾಲ್ಗೊಂಡಿದ್ದರು.