ಸುದ್ದಿ ಸಂಕ್ಷಿಪ್ತ

6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರು ಜ. 30:- ಜಾಕಿಕ್ವಾಟ್ರಸ್‍ನಲ್ಲಿರುವ ಮೈಸೂರು ಸರ್ಕಾರಿ ಆದರ್ಶ ವಿದ್ಯಾಲಯ, 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ ಎಂದು ಮೈಸೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಆದರ್ಶ ಶಾಲೆಯು ಆಂಗ್ಲ ಮಾಧ್ಯಮ, ಕೇಂದ್ರ ಪಠ್ಯಕ್ರಮ ಹೊಂದಿದ್ದು, ವಸತಿ ರಹಿತ ಶಾಲೆಯಾಗಿದ್ದು, ಪ್ರಸ್ತುತ ಐದನೇ ತರಗತಿಯಲ್ಲಿ ಮೈಸೂರು ನಗರ, ಗ್ರಾಮಾಂತರ ಶಾಲೆಗಳ ಖಾಸಗಿ ಅನುದಾನಿತ, ಅನುದಾನ  ರಹಿತ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು Online ನಲ್ಲಿ ಅರ್ಜಿ ಸಲ್ಲಿಸಬೇಕು.
ಮೈಸೂರು ತಾಲೂಕಿನ ಮೂಲ ನಿವಾಸಿಗಳ ಮಕ್ಕಳು ಹೊರ ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ, ವ್ಯಾಸಂಗ ಪ್ರಮಾಣ ಪತ್ರ, ವಾಸಸ್ಥಳ ಧೃಢೀಕರಣ ಪತ್ರದೊಂದಿಗೆ ಫೆಬ್ರವರಿ 17ರ ಸಂಜೆ 5 ಗಂಟೆಯೊಳಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ನಂಬರ್, ನಂಬರ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಸಂಖ್ಯೆ, ವಿಶೇಷ ಚೇತನ ಮಕ್ಕಳು ಮೀಸಲಾತಿ ಪಡೆಯಲು ಸಮಕ್ಷ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಆನ್‍ಲೈನ್ ಮೂಲಕ Upload ಮಾಡಿ ಅರ್ಜಿ ಸಲ್ಲಿಸಬೇಕು. ವೆಬ್ ವಿಳಾಸ: www.school education.kar.nic.in www.vidyavahini.karnataka.gov.in  ಪರೀಕ್ಷೆಯು ಮಾರ್ಚ್ 11 ಭಾನುವಾರ 10:30 ರಿಂದ 1 ಗಂಟೆಯವರೆಗೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: