ಮೈಸೂರು

ಭಾಷಾ ವಿಷಯದ ಮೇಲೆ ಪ್ರೌಢಿಮೆ ಸಾಧಿಸದ ಹೊರತು ವಿಜ್ಞಾನ ವಿಷಯಗಳ ಮೇಲೆ ಹಿಡಿತ ಹೊಂದಲು ಸಾಧ್ಯವಿಲ್ಲ : ಪ್ರೊ.ಇ.ಸತ್ಯನಾರಾಯಣ

ಮೈಸೂರು,ಜ.30:- ಭಾಷಾ ವಿಷಯದ ಮೇಲೆ ಪ್ರೌಢಿಮೆ ಸಾಧಿಸದ ಹೊರತು ವಿಜ್ಞಾನ ವಿಷಯಗಳ ಮೇಲೆ ಹಿಡಿತ ಹೊಂದಲು ಸಾಧ್ಯವಾಗುವುದಿಲ್ಲ ಎಂದು ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಇ.ಸತ್ಯನಾರಾಯಣ ತಿಳಿಸಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆಯೋಜಿಸಿದ ಬಹುಭಾಷಾ ಸಂದರ್ಭದಲ್ಲಿ ಪಠ್ಯಕ್ರಮದಲ್ಲಿ ಭಾಷೆ  ಬಳಕೆ ವ್ಯಾಪ್ತಿಮಮತ್ತು ಸವಾಲುಗಳು ಕುರಿತ ಮೂರು ದಿನಗಳ ವಿಚಾರಸಂಕಿರಣದಲ್ಲಿ ಪಾಲ್ಗೊಮಡು ಮಾತನಾಡಿದರು. ಹಲವು ರಾಜ್ಯಗಳಲ್ಲಿ ಒಂದಕ್ಕಿಂತ ಅಧಿಕ ಭಾಷೆಗಳನ್ನಾಡುವ ಜನರಿದ್ದಾರೆ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.10ರಷ್ಟು ಮಂದಿ ತೆಲುಗು ಮಾತನಾಡುತ್ತಾರೆ. ಶಾಲೆಗಳಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ ಮಕ್ಕಳು ಇದ್ದಾಗ ಶಿಕ್ಷಕರು ಪರಿಣಾಮಕಾರಿ ಬೋಧನ ಕ್ರಮವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಕೆಲವರಿಗೆ ಮಾತೃಭಾಷೆಯೇ ತಿಳಿದಿರುವುದಿಲ್ಲ. ಅವರು ಮಾತನಾಡಿದ್ದು ಯಾರಿಗೂ ಅರ್ಥವಾಗುವುದೂ ಇಲ್ಲ. ನೆರೆಹೊರೆಯ ರಾಜ್ಯಗಳ ಭಾಷೆಗಳ ಪ್ರಭಾವವೇ ಅದಕ್ಕೆ ಕಾರಣವಾಗಿದೆ. ಅದಕ್ಕಾಗಿ ಅವರ ನಿರ್ದಿಷ್ಟ ಭಾಷೆಯನ್ನು ಅರಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಮಾತೃಭಾಷೆಯಲ್ಲಿ ಪ್ರಭುತ್ವ ಸಾಧಿಸಿದ್ದರೆ ಉಳಿದ ಭಾಷೆಗಳನ್ನು ಕಲಿಯಬಹುದು. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಎರಡ್ಮೂರು ಭಾಷೆ ಗೊತ್ತಿರಬೇಕು. ಪಠ್ಯಕ್ರಮದಲ್ಲಿ ಎರಡ್ಮುರು ಭಾಷೆಗಳು ಇದ್ದರೂ ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಕಷ್ಟವಾಗುತ್ತದೆ ಎಂದರು.

ಈ ಸಂದರ್ಭ ಮಹಾತ್ಮಾ ಗಾಂಧಿ ಅಂತರರರಾಷ್ಟ್ರೀಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಜಿ.ಗೋಪಿನಾಥ್, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಎನ್.ಮನುಚಕ್ರವರ್ತಿ, ನಟಿ ಭಾವನಾ, ಆರ್ ಐಇ ಪ್ರಾಂಶುಪಾಲ ಪ್ರೊ.ವೈ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: