ಮೈಸೂರು

ಪ್ರಿಯಕರನಿಂದಲೇ ಪ್ರೇಯಸಿಯ ಕೊಲೆ

mangala-web-2ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೋರ್ವ ತನ್ನ ಪ್ರೇಯಸಿಯನ್ನೇ ಕೊಚ್ಚಿ ಕೊಲೆಗೈದ ಘಟನೆ ಮೈಸೂರಿನ ಪಿರಿಯಾಪಟ್ಟಣದ ಉಪ್ಪಾರಗೇರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಪ್ರಿಯಕರನಿಂದ ಕೊಲೆಯಾದ ಮಹಿಳೆಯನ್ನು ಮಂಗಳ(28) ಎಂದು ಗುರುತಿಸಲಾಗಿದೆ. ಮಂಗಳ ಈಗಾಗಲೇ ಶಿವ ಎಂಬಾತನನ್ನು ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಳು. ಇದೀಗ ರವಿ ಎಂಬಾತನ ಜೊತೆ ಆಕೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು ಎನ್ನಲಾಗಿದೆ. ಪತ್ನಿಯ ಅನೈತಿಕ ಸಂಬಂಧವನ್ನು ಪತಿ ವಿರೋಧಿಸಿದ್ದ.  ವಿರೋಧವನ್ನೂ ಲೆಕ್ಕಿಸದೇ ಮಂಗಳ ರವಿಯ ಜೊತೆ ಬೆಂಗಳೂರಿಗೆ ತೆರಳಿದ್ದಳು. ಇತ್ತೀಚೆಗೆ ಪತಿ ಮತ್ತು ಪತ್ನಿಯ ಜೊತೆ ಹಿರಿಯರು ಸಂಧಾನ ನಡೆಸಿದ ಕಾರಣ ಮತ್ತೆ ಗಂಡನ ಮನೆ ಸೇರಿದ್ದಳು ಎಂದು ತಿಳಿದು ಬಂದಿದೆ.

ಆದರೆ ಮಂಗಳ ಪತಿ ಮನೆ ಸೇರಿರುವುದರಿಂದ ಬೇಸತ್ತ ಪ್ರಿಯಕರ ಸೋಮವಾರ ಬೆಳಿಗ್ಗೆ ಅವರ ಮನೆಗೆ ಬಂದು ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪ್ರಿಯಕರ ರವಿಯ ಮೇಲೆ ದೂರು ದಾಖಲಿಸಿಕೊಂಡಿರುವ ಪಿರಿಯಾಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

Leave a Reply

comments

Related Articles

error: