ಮೈಸೂರು

ಪದವಿಗಳಿಗೆ ಆಸೆ ಪಡುವ ಬದಲಾಗಿ ಆದರ್ಶಗಳಿಗೆ, ಮೌಲ್ಯಗಳಿಗೆ ಬೆಲೆಕೊಡಬೇಕು : ಪ್ರೊ. ನೀ. ಗಿರಿಗೌಡ

ಮೈಸೂರು,ಜ.30:- ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಸೋಮವಾರ ನಡೆದ ಸಮಾರೋಪದಲ್ಲಿ ಪಾಲ್ಗೊಂಡು ಸಾಹಿತಿ ಪ್ರೊ. ನೀ. ಗಿರಿಗೌಡ, ಮಾತನಾಡಿ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತನ್ನು ಸ್ಮರಿಸಿದರು.  ದುಡಿಮೆಯೇ ದೇವರು, ದುಡಿಮೆ ಇಲ್ಲದೆ ಸಂಪತ್ತನ್ನು ಗಳಿಸುವುದು ಪಾಪ ಎಂದು ಹೇಳಿದರು. ಸಾಹಿತ್ಯ ಹಾಗೂ ಸಂಗೀತಕ್ಕೆ ಅಯಸ್ಕಾಂತೀಯ ಶಕ್ತಿ ಇದೆ. ಅದು ಎಲ್ಲರನ್ನು ಆಕರ್ಷಿಸುತ್ತದೆ. ಜನ ಜೀವನಕ್ಕೆ ತುಂಬ ಹತ್ತಿರದಲ್ಲಿದೆ. ಬಸವಣ್ಣ ಅನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಮಪ್ರಭುವನ್ನು ಅಧ್ಯಕ್ಷರನ್ನಾಗಿ ಮಾಡಿದರು. ಗಾಂಧೀಜಿಯು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ ಯಾವ ಪದವಿಗೂ ಆಸೆ ಪಟ್ಟವರಲ್ಲ. ಪದವಿಗಳಿಗೆ ಆಸೆ ಪಡುವ ಬದಲಾಗಿ ಆದರ್ಶಗಳಿಗೆ, ಮೌಲ್ಯಗಳಿಗೆ ಬೆಲೆಕೊಡಬೇಕು. ಮಹಿಳೆಯರು ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉನ್ನತ ಬದುಕನ್ನು ಬದುಕಬೇಕು ಎಂದು ಹೇಳಿದರು. ಶಿಕ್ಷಕರು ಹಾಸ್ಯ ಪ್ರವೃತ್ತಿಯಿಂದ ಬೋಧಿಸಿ ವಿದ್ಯಾರ್ಥಿಗಳ ಮನಮುಟ್ಟಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಲೋಕೇಶಮೂರ್ತಿ ಬಹುಮಾನ ವಿತರಿಸಿದರು. ಈ ಸಂದರ್ಭ, ಶೈಕ್ಷಣಿಕ ಸಂಯೋಜನಾಧಿಕಾರಿ ಪ್ರೊ. ಕೆ. ಸತ್ಯನಾರಾಯಣ,  ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಿ. ಪ್ರಸಾದಮೂರ್ತಿ, ಅರ್ಥಶಾಸ್ತ್ರ ವಿಭಾಗದ  ಉಪನ್ಯಾಸಕಿ ಗುರುಶಾಂತಮ್ಮ ಡಿ.ಪಿ, ಇತಿಹಾಸ ವಿಭಾಗದ ಉಪನ್ಯಾಸಕರಾದ ಪ್ರದೀಪ್ ವಿ. ಭೂಗೋಳಶಾಸ್ತ್ರ ವಿಭಾಗದ ಉಪನ್ಯಾಸಕಿ  ವಿ.ಡಿ. ಸುನೀತಾರಾಣಿ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. (ಎಸ್.ಎಚ್)

Leave a Reply

comments

Related Articles

error: