ಪ್ರಮುಖ ಸುದ್ದಿಮೈಸೂರು

ರಾಜಕೀಯ ಪಕ್ಷಗಳು ಸೌಹಾರ್ದತೆಯನ್ನು ಹಾಳು ಮಾಡಲು ಹೊರಟಿವೆ : ನಟ ಪ್ರಕಾಶ್ ರೈ

ಮೈಸೂರು,ಜ.30:-  ಹಿರಿಯ ಪರ್ತಕರ್ತೆ  ಗೌರಿ ಲಂಕೇಶ್ ಹತ್ಯೆ ಖಂಡಿಸಿ ಕರ್ನಾಟಕ ಸೌಹಾರ್ದ ಪರಂಪರೆ ಉಳಿಸೋಣ ಎಂಬ ಧ್ಯೇಯದೊಂದಿಗೆ ಮೈಸೂರಿನಲ್ಲಿ ಸೌಹಾರ್ದತೆಗಾಗಿ ಕರ್ನಾಟಕ ವತಿಯಿಂದ ಮಾನವ ಸರಪಳಿ ನಿರ್ಮಿಸಿ  ಪ್ರತಿಭಟನೆ‌ ನಡೆಯಿತು.

ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ಮಾನವ ಸರಪಳಿ ನಿರ್ಮಿಸಿ ವಿನೂತನವಾಗಿ ಪ್ರತಿಭಟಿಸಿದರು. ಇದೇ ಸಂದರ್ಭ  ಚಿತ್ರ ನಟ ಪ್ರಕಾಶ್ ರೈ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ರಾಜಕೀಯ ಪಕ್ಷಗಳು ಸೌಹಾರ್ದತೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಸೌಹಾರ್ದತೆ ನಮ್ಮ ಬೆನ್ನೆಲುಬು. ಜನರ ಜನರ ಮಧ್ಯವೇ ಸೌಹಾರ್ದತೆಯಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.ಅದಕ್ಕೆ ಜನರೇ ಉತ್ತರ ಕೊಡುತ್ತಾರೆ. ಪ್ರತಿಯೊಬ್ಬ ಪ್ರಜೆ ಪ್ರಜೆಯಾಗಿ ಉಳಿದು ಸ್ವತಂತ್ರವಾಗಿರಲು ಅವಕಾಶ ಮಾಡಿಕೊಡಬೇಕು. ಯಾರು ಕೋಮು ಗಲಭೆ ಸೃಷ್ಟಿಸಿ ರಾಜಕಾರಣ ಮಾಡುತ್ತಾರೋ ಅವರು ಗೆಲ್ಲಲು ಸಾಧ್ಯವಿಲ್ಲ. ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರು ಗೆಲ್ಲುತ್ತಾರೆ. ರಕ್ತಪಾತ, ಕೊಲೆ,ದರೋಡೆ ಇದನ್ನು ಯಾರೇ ಮಾಡಿದರೂ ತಪ್ಪು ತಪ್ಪೇ.ಎಲ್ಲರೂ 5 ವರ್ಷ

ರಾಜಕೀಯ ಮಾಡುತ್ತಾರೆ. ಆದರೆ  ಅದೇ ಐದು ವರ್ಷ ನಾವು ನೆಮ್ಮದಿಯ ಜೀವನ ನಡೆಸಬೇಕಲ್ಲಾ. ಜಾತಿ,ಹಣಕ್ಕಾಗಿ ಮತ ಹಾಕಬೇಡಿ ದೇಶಕ್ಕಾಗಿ ಮತ ಹಾಕಿ ಎಂದರು.  ಮಸಜಿದ್ ಎ ಅಸಮ್ ಮಸೀದಿ, ಸೆಂಟ್ ಫಿಲೋಮಿನಾ ಚರ್ಚ್ ಮಾರ್ಗವಾಗಿ ಮಾನವ ಸರಪಳಿ ಮೆರವಣಿಗೆ ಸಾಗಿತು. ಮಾವನ ಸರಪಳಿಯಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ , ಪ್ರೊ.ಎಸ್.ಭಗವಾನ್, ದೇವನೂರ ಮಹದೇವ, ರಹಮತ್ ತರಿಕೆರೆ, ಜಿ.ಎಸ್.ನಾಯಕ್, , ಮುಜಾಫತ್ ಅಸ್ಸಾದಿ, ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: