ಮೈಸೂರು

ಸಾಲ ವಾಪಸ್ ಮಾಡಲು ಕೇಳಿದ್ದಕ್ಕೆ ಕೇಳಿದವನ ಮೇಲೆಯೇ ಹಲ್ಲೆ-ದೂರು ಪ್ರಕರಣ : ಮರ್ಯಾದೆಗಂಜಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಿಸದೇ ಸಾವು

ಮೈಸೂರು,ಜ.31:- ವಿಕಲಚೇತನನೋರ್ವ ಗುಜರಿ ಅಂಗಡಿ ಮಾಲಿಕನಿಗೆ ಸಾಲ ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರ ಪ್ರತಿಫಲವಾಗಿ ವಿಕಲಚೇತನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಾಲಿಗ್ರಾಮದಲ್ಲಿ ಜನವರಿ 23ರಂದು ನಡೆದಿತ್ತು. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಕೆ.ಆರ್.ನಗರದ ಸಾಲಿಗ್ರಾಮ ನಿವಾಸಿ ಧನಂಜಯ್ (20)ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದೇ ಸಾವನ್ನಪ್ಪಿದವನಾಗಿದ್ದಾನೆ.   ಈತ ಪಕ್ಕದ ಮನೆ ಗುಜ್ರಿ ಅಂಗಡಿ ಮಾಲಿಕನಿಗೆ 40 ಸಾವಿರ ಸಾಲ ನೀಡಿದ್ದ. ಧನಂಜಯ್  ಗುಜರಿ ಅಂಗಡಿ ಮಾಲಿಕನ ಬಳಿ ಸಾಲ ವಾಪಸ್ ಕೇಳಿದಕ್ಕೆ ಆತನ ಕಡೆಯವರು ಧನಂಜಯ್ ಮೇಲೆ ಹಲ್ಲೆ ನಡೆಸಿದ್ದು, ಬಳಿಕ  ಆತ ಕಾರಿನಲ್ಲಿ ಆಡಿಯೋ ಸಿಸ್ಟಮ್ ಕಳುವು ಮಾಡಿದ್ದಾನೆಂದು ಬಿಂಬಿಸಿ ಠಾಣೆಗೆ ದೂರು ನೀಡಿದ್ದರು. ಧನಂಜಯ್ ನನ್ನು ಸಾಲಿಗ್ರಾಮದ ಠಾಣೆ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಅದನ್ನು ಕೆಲಪುಂಡರು ವಿಡಿಯೋ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದರು. ಇದರಿಂದ ಧನಂಜಯ್ ಮರ್ಯಾದೆಗೆ ಅಂಜಿ ವಿಷ ಕುಡಿದಿದ್ದ.  ಆತನ ಸ್ಥಿತಿ ಗಂಭೀರವಾಗಿತ್ತು., ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.  ಇದ್ದ ಒಬ್ಬ ಮಗನನ್ನು  ಕಳೆದುಕೊಂಡ ಆತನ ತಾಯಿ ರಾಣಿ ಕಂಗಾಲಾಗಿದ್ದಾರೆ. ಅಮಾಯಕ ಅಂಗವಿಕಲನನ್ನು ಪೊಲೀಸರು ವಿಚಾರಣೆ ನಡೆಸಿದ್ದು ಸರಿಯಾದರೂ, ವಿಡಿಯೋ ವನ್ನು ವಾಟ್ಸಪ್ ಗೆ ಶೇರ್ ಮಾಡಿದ್ಯಾಕೆ ಅದರ ಹಿಂದಿನ ಕುತಂತ್ರವೇನು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಪ್ರಶ್ನೆ ಕೊನೆಗೂ ಪ್ರಶ್ನೆಯಾಗಿಯೇ ಉಳಿದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: