ಮೈಸೂರು

ಸ್ನೇಕ್ ಶ್ಯಾಂ ಅವರಿಗೆ ‘ಭಾರತ್ ಜ್ಯೋತಿ ಪ್ರಶಸ್ತಿ’ ಪ್ರದಾನ

ಮೈಸೂರು,ಜ.31:- ಮಹಾನಗರಪಾಲಿಕೆಯ ಸದಸ್ಯ ಸ್ನೇಕ್ ಶ್ಯಾಂ (ಬಾಲಸುಬ್ರಹ್ಮಣ್ಯ) ಅವರ ಪ್ರಶಂಸನೀಯ ಹಾಗೂ ಗಮನಾರ್ಹ ಸೇವೆ ಗುರುತಿಸಿ ಇಂಡಿಯಾ ಇಂಟರ್ ನ್ಯಾಶನಲ್ ಫ್ರೆಂಡ್ ಶಿಪ್ ಸೊಸೈಟಿ ವತಿಯಿಂದ ‘ಭಾರತ್ ಜ್ಯೋತಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ.

ಸೊಸೈಟಿಯ ಸೆಕ್ರೆಟರಿ ಜನರಲ್ ಗುರುಪ್ರೀತ್ ಸಿಂಗ್ ಸ್ನೇಕ್ ಶ್ಯಾಂ ಅವರನ್ನು ಗುರುತಿಸಿ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದರು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಸ್ಸಾಂ ಮತ್ತು ತಮಿಳುನಾಡಿನ ಮಾಜಿ ರಾಜ್ಯಪಾಲ ಡಾ.ಭೀಷ್ಮ ನರೇನ್ ಸಿಂಗ್ ಪ್ರಶಸ್ತಿ ಪ್ರದಾನಿಸಿದರು. ಸ್ನೇಕ್ ಶ್ಯಾಂ ಅವರು ಯಾವುದೇ ರೀತಿಯ ವಿಷದ ಹಾವುಗಳಾದರೂ ಸರಿ ಯಾರದಾದರೂ ಮನೆಯಲ್ಲಿ ಬಂದು ಸೇರಿಕೊಂಡಿದೆ ಎಂದು ಪೋನಾಯಿಸಿದರೆ ತಕ್ಷಣ ಸ್ಥಳಕ್ಕೆ ತೆರಳಿ ಅದನ್ನು ಚಾಕಚಕ್ಯತೆಯಿಂದ ಹಿಡಿದು ಕಾಡಿಗೆ ಬಿಟ್ಟು ಬರುತ್ತಿದ್ದರು. ಇದುವರೆಗೂ ಅವರು 33,000ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: