ಮೈಸೂರು

ಮೈಸೂರಿನ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ : ಸ್ಥಳದಲ್ಲಿಯೇ ಮೂವರು ಸಾವು

ಮೈಸೂರು,ಜ.31:- ಅತಿವೇಗದಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಿಂಗ್ ರಸ್ತೆಯಿಂದ ಸರ್ವೀಸ್ ರಸ್ತೆಗೆ ಬಂದು ಬಿದ್ದಿದ್ದು ಸ್ಥಳದಲ್ಲಿ ಓರ್ವಳು ಯುವತಿ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಬೋಗಾದಿ ಜಂಕ್ಷನ್ ಕಡೆಯಿಂದ ಇಬ್ಬರು ಯುವತಿಯರು ಯುವತಿ ಮತ್ತು ಮೂವರು ಯುವಕರನ್ನು ಹೊತ್ತಿದ್ದ ಕಾರು 150ಕಿ.ಮೀ ವೇಗದಲ್ಲಿ ಬಂದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಿಂಗ್ ರಸ್ತೆಯಿಂದ ಸರ್ವೀಸ್ ರಸ್ತೆಗೆ ಉರುಳಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನ ಬಾಗಿಲುಗಳು ಕಿತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.  ಕಾರಿನಲ್ಲಿದ್ದವರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ಸ್ಥಳದಲ್ಲಿಯೇ ಓರ್ವಳು ಯುವತಿ ಇಬ್ಬರು ಯುವಕರು ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇನ್ನಿಬ್ಬರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕೆ.ಆರ್.ಸಂಚಾರಿ ಠಾಣೆಯ ಪೊಲೀಸರು,ಕುವೆಂಪುನಗರ ಠಾಣೆಯ ಪೊಲೀಸರು  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇವರು ಸೇಂಟ್ ಜೋಸೆಫ್  ಸೇರಿದಂತೆ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ಅಸಿಂ,ಮಹಮ್ಮದ್  ಫರಾನ್, ದಿವ್ಯ ಮೃತಪಟ್ಟಿದ್ದು, ರಿಯಾನ್ಹುಲ್ ರೆಹಮಾನ್ ಹಾಗೂ ಸ್ಫೂರ್ತಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: