ಕರ್ನಾಟಕ

ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ: ಮೂವರ ಸಾವು

ಮಂಗಳೂರು,ಜ.31: ರೈಲ್ವೇ ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ವರ್ಷದ ಮಗು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಕಾಸರಗೋಡುನ ಮಂಜೇಶ್ವರ ರೈಲ್ವೆ ನಿಲ್ದಾಣದ ಬಳಿಯೇ  ನಡೆದಿದೆ.

ಇಬ್ಬರು ಮಹಿಳೆಯರು ಸೇರಿದಂತೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಮಂಜೇಶ್ವರದಲ್ಲಿ ಮುಖ್ಯ ರಸ್ತೆಯಿಂದ ಇನ್ನೊಂದು ದಾರಿಗೆ ರೈಲ್ವೆ ಹಳಿಯನ್ನು ದಾಟಬೇಕಾದ ಅನಿವಾರ್ಯತೆ ಇರುವುದರಿಂದ ಎಂದಿನಂತೆ ಇಂದು ಸ್ಥಳೀಯರು ರೈಲ್ವೇ ಹಳಿ ದಾಟುತ್ತಿದ್ದರು. ಒಂದು ರೈಲು ಪಾಸಾದ ನಂತರ ಹಳಿ ದಾಟುತ್ತಿದ್ದ ವೇಳೆ ಮತ್ತೊಂದು ಹಳಿಯಲ್ಲಿ ವೇಗವಾಗಿ ಬಂದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ್ದ ಮಹಿಳೆಯರು ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಮಂಜೇಶ್ವರ ರೈಲ್ವೇ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: