ಕರ್ನಾಟಕಪ್ರಮುಖ ಸುದ್ದಿ

ಬಜೆಟ್ ನಲ್ಲಿ ದೇಶದ ಆರ್ಥಿಕ ಪ್ರಗತಿಗೆ ಒತ್ತು ನೀಡಿ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹ : ಜಗದೀಶ್ ಶೆಟ್ಟರ್

ರಾಜ್ಯ(ಬೆಂಗಳೂರು)ಫೆ.1:- ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯೀಕರಣ ಹಾಗೂ ಜಿ.ಎಸ್.ಟಿ.ಜಾರಿಯಂತಹ ದಿಟ್ಟ ಆರ್ಥಿಕ ಕ್ರಮಗಳ ನಂತರ ಭಾರತ ಜಗತ್ತಿನ 6ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಕೃಷಿ ಆದಾಯ ದ್ವಿಗುಣಗೊಳಿಸುವ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆ ಸಾಕಾರಗೊಳಿಸುವ ಆರ್ಥಿಕ ಶಿಸ್ತುಳ್ಳ ಬಜೆಟ್ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಶ್ಲಾಘಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಹೇಳಿಕೆ ನೀಡಿದ ಅವರು ಅರುಣ್ ಜೇಟ್ಲಿಯವರು ದಿಟ್ಟತನದಿಂದ ಬಜೆಟ್ ನಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ಶೇ.7.2ರಿಂದ 7.5ರ ಏರಿಕೆಗೆ ಉದ್ದೇಶಿಸಿರುವುದು ದಿಟ್ಟ ಕ್ರಮವಾಗಿದೆ. ಕೃಷಿ ಮಾರುಕಟ್ಟೆ ಆದಾಯ ದ್ವಿಗುಣಗೊಳಿಸುವ ಸಂಕಲ್ಪದೊಂದಿಗೆ ಕೃಷಿ ಮಾರುಕಟ್ಟೆ ಅಭಿವೃದ್ಧಿಗೆ ಯೋಜನೆ,ಗ್ರಾಮೀಣ ಮಾರುಕಟ್ಟೆಗಳ ನಿರ್ಮಾಣ, ಎಲ್ಲಾ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಮೇಲೆ 1.5ಪಟ್ಟು ಹೆಚ್ಚಳ ಮಾಡಿದ್ದು, 50ಲಕ್ಷ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಒದಗಿಸುವುದು  ಕೃಷಿ ಉತ್ಪಾದನೆ ಕಂಪನಿಗಳಿಗೆ ಕಂಪನಿಗಳಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಿರುವುದು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಶೀಕ್ಷಣ ಸುಧಾರಣೆಗೆ ಡಿಜಟಲೀಕರಣ ವ್ಯವಸ್ಥೆ, ಬುಡಕಟ್ಟು ಜನರ ಶಿಕ್ಷಣಕ್ಕಾಗಿ ಏಕಲವ್ಯ ಶಾಲೆಗಳ ನಿರ್ಮಾಣ,ಗ್ರಾಮೀಣಾಭಿವೃದ್ಧಿಗಾಗಿ 14.34ಲಕ್ಷ ಕೋಟಿ,1ಲಕ್ಷ ಗ್ರಾ.ಪಂಗಳಿಗೆ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರ ಶಿಕ್ಷಣ ಮತ್ತು ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಲಾಗಿದೆ. ಆರೋಗ್ಯ ಇಲಾಖೆಯಲ್ಲಿ 10ಕೋಟಿ ಬಡ ಕುಟುಂಬಗಳ ಆರೋಗ್ಯ ಸುರಕ್ಷತೆಗಾಗಿ ಪ್ರತಿ ಕುಟುಂಬಕ್ಕೆ 5ಲಕ್ಷರೂ. ವಿಮೆ ಜಾರಿಗೊಳಿಸಿದ್ದು,ಪ್ರತಿ 3ಲೋಕಸಭಾ ಕ್ಷೇತ್ರಕ್ಕೆ 1ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸ್ಥಾಪನೆ ಯೋಜನೆ,ಸ್ವಚ್ಛಬಾರತ ಯೋಜನೆಯಡಿ 2ಕೋಟಿ ಶೌಚಾಲಯ ನಿರ್ಮಾಣ ಗುರಿ ಸ್ವಚ್ಛ ಭಾರತ ಸ್ವಸ್ಥ ಭಾರತ ಸಂಕಲ್ಪಕ್ಕೆ ಪೂರಕವಾಗಿದೆ ಎಂದರು.

ರೈಲ್ವೆ ಇಲಾಖೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ವೈ-ಫೈ,ಸಿಸಿಟಿವಿ ಅಳವಡಿಕೆ, ನಿಲ್ದಾಣಗಳಲ್ಲಿ ಎಸ್ಕಲೇಟರ್ ಅಳವಡಿಸುವ ವ್ಯವಸ್ಥೆ ಮತ್ತು 600ರೈಲ್ವೆ ನಿಲ್ದಾಣಗಳ ಅಭಿವೃದ್ಧಿಪಡಿಸಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹ. ಕರ್ನಾಟಕ ಜನತೆಗೆ ಬಜೆಟ್ ನಲ್ಲಿ ಬೆಂಗಳೂರು ಸಬ್-ಅರ್ಬನ್ ರೈಲು ಯೋಜನೆಗೆ 17,000ಕೋ.ರೂ ಅನುದಾನ ನಿಗದಿಪಡಿಸಲಾಗಿದೆ. ದೇಶದ ಆರ್ಥಿಕ ಪ್ರಗತಿಗೆ ಒತ್ತು ನೀಡಿ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹ ಎಂದಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: