ಮೈಸೂರು

ಸಮುದಾಯ ಭವನ ಉದ್ಘಾಟನೆ

ಮೈಸೂರಿನ ಬೋಗಾದಿಯಲ್ಲಿ ನೂತನವಾಗಿ ನಿರ್ಮಿಸಲಾದ ಬಸವೇಶ್ವರ ಸಮುದಾಯ ಭವನವನ್ನು ಸೋಮವಾರ  ಉದ್ಘಾಟಿಸಲಾಯಿತು.

ಬೋಗಾದಿ ಬಸವೇಶ್ವರ ಧರ್ಮಕಾರ್ಯ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಭವನವನ್ನು ಶಾಸಕ ಜಿ.ಟಿ. ದೇವೆಗೌಡ  ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೂ ಮುನ್ನ ಐದು ನವಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸುತ್ತೂರು ಕ್ಷೇತ್ರದ ಕಿರಿಯ ರುದ್ರ ಸ್ವಾಮೀಜಿ, ಆದಿಚುಂಚನಗಿರಿಯ ಸೋಮನಾಥ ಸ್ವಾಮೀಜಿ, ಮಾಜಿ ಶಾಸಕ ಸತ್ಯನಾರಾಯಣ, ಮೂಡಾ ಮಾಜಿ ಅಧ್ಯಕ್ಷ ನಾಗೇಂದ್ರ, ಸಮುದಾಯ ಭವನ ಟ್ರಸ್ಟಿಗಳಾದ ಅಂಕೇಶ್, ನಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: