ಮೈಸೂರು

ನೋಟು ನಿಷೇಧ ಗೊಂದಲಕ್ಕೆ ಕಾರಣವಾಗಿದೆ : ಚಂದ್ರಶೇಖರ ಆರೋಪ

ಏನೋ ದೊಡ್ಡ ಸಾಧನೆ ಮಾಡುತ್ತಿದ್ದೇವೆ ಎಂಬ ಭರದಲ್ಲಿ ಮೋದಿಯವರು 500-1000 ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೂಲಕ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅಷ್ಟೇ ಅಲ್ಲ ಗೊಂದಲವನ್ನೂ ಸೃಷ್ಟಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಕೆ.ಚಂದ್ರಶೇಖರ  ಆರೋಪಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿ.ಕೆ.ಚಂದ್ರಶೇಖರ ಮಾತನಾಡಿ ಪ್ರಸ್ತುತ  ಆದೇಶ ಕಪ್ಪುಹಣ ಬಳಸಿ ಉದ್ದೀಪನ, ಚಿನ್ನದ ವಹಿವಾಟು ಹಾಗೂ ಭಯೋತ್ಪಾದಕರು ಬಳಸುವ ಹಣದ ವಿರುದ್ಧವಾಗಿದ್ದರೂ ಈ ಆದೇಶ ಲಕ್ಷಾಂತರ ಸಾಮಾನ್ಯ ಜನರ ನಡುವೆ ಕಾನೂನು ಬದ್ಧ ವಹಿವಾಟಿಗೂ ಅಪಾರ ತೊಂದರೆ ಉಂಟು ಮಾಡಿದೆ ಎಂದರು.

ದೇಶದ ವ್ಯಾಪಾರ, ವ್ಯವಹಾರಗಳಲ್ಲಿ ಏಕಾಏಕಿ 86%ರಷ್ಟು ಹಣ ಸ್ಥಗಿತವಾಗಿದೆ. ಉದ್ದಿಮೆಗಳು, ಕುಟುಂಬಗಳು ಬಹುತೇಕ ನಗದು ರೂಪದಲ್ಲಿ ಮಾಡುತ್ತಿದ್ದ ವ್ಯವಹಾರಕ್ಕೆ ಭಾರೀ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲ ಇಡೀ ದೇಶದಲ್ಲಿ ಬಹುದೊಡ್ಡ ಪ್ರಮಾಣದ ಅವ್ಯವಸ್ಥೆ ಮತ್ತು ಗೊಂದಲಕ್ಕೆ ಕಾರಣವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾಧ್ಯಕ್ಷ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: