ಸುದ್ದಿ ಸಂಕ್ಷಿಪ್ತ

ಅರ್ಜಿ ಆಹ್ವಾನ

ಮೈಸೂರು, ಫೆ.2 :- ಮೈಸೂರು ಜಿಲ್ಲೆಯಲ್ಲಿ ವಾಸಿಸುವ ಅರಣ್ಯ, ಅವಲಂಬಿತ ಅರಣ್ಯ ಪ್ರದೇಶದ ಆಸುಪಾಸು ಮತ್ತು ಜಿಲ್ಲೆಯ ಗಡಿ ತಾಲೂಕುಗಳಲ್ಲಿನ ಆದಿವಾಸಿ ಜನಾಂಗದವರ ಅಭಿವೃದ್ಧಿಗಾಗಿ ತೋಟಗಾರಿಕೆ, ಕಾಫಿ ಪ್ಲಾಂಟೇಶನ್, ರೇಷ್ಮೆ, ತರಕಾರಿ ಮತ್ತು ಅಣಬೆ ಬೇಸಾಯ, ಜೇನು ಸಾಕಾಣಿಕೆ, ಕೃಷಿ ತೋಟಗಾರಿಕೆ ಉಪಕರಣಗಳ ಖರೀದಿ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಶೀತಲ ಘಟಕ ಸ್ಥಾಪನೆಗಳಿಗಾಗಿ ಘಟಕ ವೆಚ್ಚದ ಶೇ 70ರಷ್ಟು ಗರಿಷ್ಠ ರೂ. 1.00 ಲಕ್ಷ ಸಹಾಯಧನದ ನೀಡಲಾಗುವುದು.
ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳು ಅರ್ಜಿಯನ್ನು ಫೆಬ್ರವರಿ 15ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ, ಮೈಸೂರು ಇಲ್ಲಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: