
ಕರ್ನಾಟಕ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಂಟರ್ ಆಫ್ ಅಟ್ರ್ಯಾಕ್ಷನ್
ಬಾಗಲಕೋಟೆ, ಫೆ.02: ಯಾರು ಯಾರಿಗೂ ಆಗಲ್ಲ. ಒಂದು ಗುರಿ ಇದ್ದಲ್ಲಿ ಮಾತ್ರ ಜೀವನದಲ್ಲಿ ಸಾಧನೆಯ ದಡ ಮುಟ್ಟಲು ಸಾದ್ಯವೆಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ನಗರದ ಎಸ್.ಆರ್.ಎನ್.ಇ. ಪೌಂಡೇಶನ್ ಅಡಿ ನಿನ್ನೆ ಸಂಜೆ ಆಯೋಜಿಸಿದ್ದ ಅದ್ಧೂರಿ ಯುವ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಿ ಯಾರು ಯಾರಿಗೂ ಆಗಲ್ಲ. ಒಂದು ಗುರಿ ಇಟ್ಟುಕೊಳ್ಳಿ. ಎರಡು ದೋಣಿಯಲ್ಲಿ ಕಾಲಿಡಬೇಡಿ. ನಮ್ಮ ತೆಪ್ಪದ ಕೋಲು ನಮ್ಮ ಕೈಯಲ್ಲಿ ಇರಬೇಕು ಆಗ ಮಾತ್ರ ಗುರಿ ಮಟ್ಟಲು ಸಾಧ್ಯ. ಜೀವನದಲ್ಲಿ ಒಂದು ತಲೆ ಹಿಡಿಯೋದು, ಮತ್ತೊಂದು ತಲೆ ಹೊಡಿಯೋದು ಈ ಎರಡು ಕೆಲಸ ಮಾಡಬೇಡಿ ಎಂದರು. ಅವರ ಪ್ರತಿಯೊಂದು ಮಾತಿಗೂ ಕೂಡ ಚಪ್ಪಾಳೆ, ಶಿಳ್ಳೆಗಳ ಸುರಿಮಳೆ ಗೈದಿದ್ದಾರೆ. ಕೈಯಲ್ಲಿ ಮೈಕ್ ಹಿಡ್ಕೊಂಡು ಜೀವನದ ಬಗ್ಗೆ ಮಾತನಾಡುತ್ತಿದ್ದಂತೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು.
ಕಾರ್ಯಕ್ರಮದಲ್ಲಿ ವಿಜಯಪ್ರಕಾಶ್ ಹಾಗೂ ಖ್ಯಾತ ಹಿನ್ನಲೆ ಗಾಯಕಿ ಚೈತ್ರಾ ಅವರ ಸೂಪರ್ ಹಿಟ್ ಹಾಡುಗಳು ಕಲರವ ಮುಳುಗಿತ್ತು. ಅನುಶ್ರೀ ನಿರೂಪಣೆಯನ್ನು ಮಾಡಿದರು. ಬದ್ಮಾಶ್ ನಟ ಧನಂಜಯ್ ಹಾಗೂ ನವ ನಟ ಸೂರ್ಯ ಭಾಗಿಯಾಗಿದ್ದರು. ( ವರದಿ: ಪಿ.ಎಸ್)