ಮೈಸೂರು

ಮದ್ಯಪಾನ ಮಾಡಿ ಲಾರಿ ಚಾಲನೆ ಮಾಡಿದ ಡ್ರೈವರ್ ಮತ್ತು ಕ್ಲೀನರ್ ಗೆ ಧರ್ಮದೇಟು

ಮೈಸೂರು,ಫೆ.2:- ಮದ್ಯಪಾನ ಮಾಡಿ ಲಾರಿ ಚಾಲನೆ ಮಾಡಿದ ಡ್ರೈವರ್ ಮತ್ತು ಕ್ಲೀನರ್ ಗೆ ಸಾರ್ವಜನಿಕರು  ಧರ್ಮದೇಟು ನೀಡಿದ ಘಟನೆ ಕಡಕೊಳ ಸಮೀಪ ಟಿ.ವಿ.ಎಸ್. ಕಾರ್ಖಾನೆ ಬಳಿ ನಡೆದಿದೆ.

ರಾಜಸ್ಥಾನ ಮೂಲದವರಾದ ಡ್ರೈವರ್, ಕ್ಲೀನರ್ ಇಬ್ಬರು ಮದ್ಯಪಾನ ಮಾಡಿ ದಾರಿಯುದ್ದಕ್ಕೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದರು. ಮೈಸೂರು ತಾಲೂಕಿನ ಕಡಕೊಳ ಸಮೀಪ ಟಿ.ವಿ.ಎಸ್. ಕಾರ್ಖಾನೆ ಬಳಿ ಬೆನ್ನಟ್ಟಿದ ಸಾರ್ವಜನಿಕರು ಸಿಕ್ಕಿಬಿದ್ದ ಡ್ರೈವರ್ ಮತ್ತು ಕ್ಲೀನರ್ ಗೆ ಸಾರ್ವಜನಿಕರು ಧರ್ಮದೇಟು ನೀಡಿದರು. ಚೆನ್ನಾಗಿ ಥಳಿಸಿ ಪಾನಮತ್ತರಾಗಿದ್ದ ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಹತ್ತು ಕಿ.ಮೀ. ತನಕ ಚಾಲಕ ಅಡ್ಡಾದಿಡ್ಡಿ ವಲಾರಿ ಓಡಿಸಿದ್ದ. ಅಡ್ಡಬಂದ ದ್ವಿಚಕ್ರ ವಾಹನ ಸವಾರರಿಗೆ ಗಾಯಗಳಾಗಿದ್ದು, ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಅಡ್ಡಗಟ್ಟಲು ಯತ್ನಿಸಿದವರ ಮೇಲೆ ಲಾರಿ ಚಾಲಕ  ಲಾರಿ ಹತ್ತಿಸಲೆತ್ನಿಸಿದ. ಇದೀಗ ಕಡಕೊಳ ಪೊಲೀಸರು ಪಾನಮತ್ತ ಚಾಲಕ ಮತ್ತು ಕ್ಲೀನರ್ ನನ್ನು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: