ಮೈಸೂರು

ಕುಡುಕ ಗಂಡನ ಕಾಟ ತಾಳಲಾರದೇ ಮಗುವನ್ನು ಬಿಟ್ಟು ತೆರಳಿದ ಪತ್ನಿಯಿಂದ ನ್ಯಾಯಕ್ಕಾಗಿ ಮೊರೆ

ಮೈಸೂರು,ಫೆ.2:- ಕುಡುಕ ಗಂಡನ ಕಾಟ ತಾಳಲಾರದೇ ಪತ್ನಿ ತನ್ನ ಮಗುವನ್ನು ಅಲ್ಲಿಯೇ ಬಿಟ್ಟು  ತವರು ಮನೆ ಸೇರಿದ್ದು, ಮಗುವನ್ನು ತನಗೆ ದೊರಕಿಸಿಕೊಡುವಂತೆ ಪೊಲೀಸರ ಬಳಿ ಅಂಗಲಾಚುತ್ತಿರುವ ಘಟನೆ ನಂಜನಗೂಡು ತಾಲೂಕಿನ ಏಚ ಗುಂಡ್ಲ ಗ್ರಾಮದಲ್ಲಿ  ನಡೆದಿದೆ.

ಮೈಸೂರು ತಾಲೂಕಿನ ಉದ್ಭೂರು ಗ್ರಾಮದ ಮರು ಚೂಡಾ ಎಂಬವರ ಮಗಳಾದ ರತ್ನಮ್ಮ ಎಂಬಾಕೆಯನ್ನು ನಂಜನಗೂಡು ತಾಲೂಕಿನ ಏಚ ಗುಂಡ್ಲ ಗ್ರಾಮದ ಮರಿ ನಾಯ್ಕ ಎಂಬವರ ಮಗ ಅಯ್ಯಪ್ಪ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು . ಒಂದು ಲಕ್ಷ ರೂ. ನಗದು, ಒಂದು ಉಂಗುರ ಮತ್ತು ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು . ಅಯ್ಯಪ್ಪ ಎಂಬಾತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ದಿನ ನಿತ್ಯ ಕುಡಿದು ಬಂದು ಮನೆಯಲ್ಲಿ ನನಗೆ ತುಂಬಾ ಹಿಂಸೆ ನೀಡುತ್ತಿದ್ದ. ಕುಡಿದ ಮತ್ತಿನಲ್ಲಿ ಅಪರಿಚಿತರನ್ನು ಮನೆಯೊಳಗೆ ಕರೆತಂದು ಅವರ ಜೊತೆ ಮಾತನಾಡು ಎಂದು ಎಂದು ಹಿಂಸೆ ನೀಡುತ್ತಿದ್ದ. ನಾನು ಹೇಳಿದ ಹಾಗೆ ನಡೆದುಕೊಳ್ಳದಿದ್ದರೆ ಸೀಮೆ ಎಣ್ಣೆ ಸುರಿದು ಸುಟ್ಟು ಹಾಕುತ್ತೇನೆ ಎಂದು ಬೆದರಿಕೆಯೊಡ್ಡುತ್ತಿದ್ದ ಎನ್ನಲಾಗಿದೆ. ಇದಕ್ಕೆ ಹೆದರಿದ ವಿವಾಹಿತ ಮಹಿಳೆ ತಂದೆ ಮನೆಗೆ ರಾತ್ರೋರಾತ್ರಿ ಹೋಗಿ  ಜೀವ ಬದುಕಿಸಿಕೊoಡಿದ್ದಾಳೆ. ಈ ಎಲ್ಲ ವಿಚಾರವನ್ನು ತಂದೆಯ ಮನೆಯಲ್ಲಿ ಹೇಳಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಪತಿ ಗ್ರಾಮಸ್ಥರ ಜೊತೆ ಇಲ್ಲಸಲ್ಲದ ಆರೋಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾನೆ.  ಎಷ್ಟೇ ಕಷ್ಟ ಕೊಟ್ಟರು ನನ್ನ ನಾಲ್ಕು ವರ್ಷದ ಪುಟ್ಟ ಮಗುವಿನ ಜೊತೆ ಸಂಸಾರ ನಡೆಸುತ್ತಿದ್ದೆ. ನನಗೆ ಗೊತ್ತಿಲ್ಲದ ಅಪರಿಚಿತ ಯುವಕರನ್ನು ಮನೆಗೆ ಕರೆತಂದು ಈತ ನನ್ನ ಸ್ನೇಹಿತ ಇವನ ಜೊತೆ ಕುಳಿತು ಮಾತನಾಡು ಅವನಿಂದ ನನಗೆ ಹಣ  ತೆಗೆಸಿಕೊಡು ಎಂದು ಹಿಂಸೆ ನೀಡುತ್ತಿದ್ದ . ಇಲ್ಲದಿದ್ದರೆ ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದು, ರಾತ್ರೋ ರಾತ್ರಿ ಮಗುವನ್ನು ಬಿಟ್ಟು ನನ್ನ ಜೀವ ರಕ್ಷಣೆಗಾಗಿ ನಮ್ಮ ತಂದೆ ಮನೆಗೆ ತೆರಳಿದೆ. ಆದರೆ ನಾನು ಬಂದು ಎರಡು ತಿಂಗಳು ಕಳೆದರೂ ನನ್ನ ಮಗುವನ್ನು ನನ್ನ ಬಳಿ ತಂದುಕೊಟ್ಟಿಲ್ಲ. ಪೊಲೀಸರ ಬಳಿ ಹೋದರೆ ನಾಳೆ ಬಾ ಎಂದು ಸಬೂಬು ಹೇಳುತ್ತಾರೆ. ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನ್ಯಾಯಕ್ಕಾಗಿ ತಂದೆ ತಾಯಿಯ ಜೊತೆ ಕಾದು ಕುಳಿತಿಳೆ. ಮಾನವೀಯತೆ ಇರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಹಿಳೆಯ ಕಷ್ಟಕ್ಕೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: