
ಮೈಸೂರು
ಡಾ.ಸಿ.ಪಿ.ಕೆ ವಿರಚಿತ ಕೃತಿಗಳ ಲೋಕಾರ್ಪಣೆ
ಮೈಸೂರಿನ ಇಂಚರ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ದೀಪ್ತಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಸೋಮವಾರ ಕರ್ನಾಟಕ ರತ್ನ ದೇಜಗೌ ಶ್ರೀಸಾಮಾನ್ಯ ಸಾಹಿತ್ಯ ಮಾಲೆ ಪ್ರಕಟಿಸಿರುವ ನಾಡಿನ ಹಿರಿಯ ಸಾಹಿತಿ ಡಾ.ಸಿ.ಪಿ.ಕೆ ವಿರಚಿತ ಭಗವದ್ಗೀತೆ ಜಗದ ಭಾಗ್ಯ, ಸ್ವಾಮಿ ವಿವೇಕಾನಂದರ ವಿವೇಚನೆ, ಶ್ರೀ ರಾಮಕೃಷ್ಣ ದರ್ಶನ, ಶ್ರೀಶಾರದಾ ಸೌರಭ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ಕೆ.ಅನಂತರಾಮು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
ಸಾಹಿತಿ ಪ್ರೊ.ಕೆ.ಭೈರವ ಮೂರ್ತಿ ಕೃತಿಯ ಲೇಖಕರನ್ನು ಸನ್ಮಾನಿಸಿದರು. ಈ ಸಂದರ್ಭ ಕವಯಿತ್ರಿ ಡಾ.ಲತಾ ರಾಜಶೇಖರ್, ಡಿ.ವಿ.ಕೆ ಪ್ರಕಾಶನದ ಪ್ರೊ.ಎನ್.ದ್ವಾರಕಾನಾಥ, ಸಂಸ್ಕೃತಿ ಪೋಷಕ ನಟರಾಜ ಜೋಯ್ಸ್, ಗುಪ್ತ ಆಫ್ ಸೆಟ್ ಪ್ರಿಂಟರ್ಸ್ ಮಾಲೀಕ ರಾಮನಾಥ ಗುಪ್ತ, ಹಿರಿಯ ಸಾಹಿತಿ ಎಂ.ಬಿ.ಜಯಶಂಕರ ಉಪಸ್ಥಿತರಿದ್ದರು.