ಸುದ್ದಿ ಸಂಕ್ಷಿಪ್ತ

ಬಡತನ ನಿರ್ಮೂಲನೆಗಾಗಿ ಜಾಗೃತಿ ಜಾಥಾ ಫೆ.3

ಮೈಸೂರು, ಫೆ.2 : ಧಾನ್ ಫೌಂಡೇಷನ್ ಸ್ವಯಂ ಸೇವಾ ಸಂಸ್ಥೆಯು ಬಡತನ ನಿರ್ಮೂಲನೆಗಾಗಿ ಸಮುದಾಯದ ಆರ್ಥಿಕ ಕೊಡುಗೆ ಬಗ್ಗೆ ಜಾಗೃತಿ ಜಾಥಾವನ್ನು ಫೆ.3ರ ಬೆಳಗ್ಗೆ 10 ಗಂಟೆಗೆ ಅಶೋಕಪುರಂನ ಅಂಬೇಡ್ಕರ್ ಪಾರ್ಕಿನ ಬಳಿಯಿಂದ ಚಾಲನೆಗೊಂಡು ಕೋರ್ಟ್ ರಸ್ತೆ ಮುಖಾಂತರ  ಅರಣ್ಯ ಭವನದ ಮುಂಭಾಗದ ಶಿವರಾಮ್ ಪಿಚ್ ಮೈದಾನದ್ಲಲಿ ಸಮಾಪ್ತಿಯಾಗುವುದು.

ಜಾಥಾಕ್ಕೆ ಸಂಚಾರಿ ಮತ್ತು ಅಪರಾಧ ವಿಭಾಗ ಉಪ ಪೊಲೀಸ್ ಆಯುಕ್ತ ಡಾ.ವಿಕ್ರಮ್ ಅಮಟ್ , ಧಾನ್ ಫೌಂಡೇಷನ್ ವಲಯ ಅಧಿಕಾಋಇ ಪಿ.ಡಿ.ಸಿಂಧು, ಪಾಲಿಕೆ ಸದಸ್ಯ ಪುರುಷೋತ್ತಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಚ್.ಚನ್ನಪ್ಪ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: