ಮೈಸೂರು

ವ್ಯಾಪಾರೀಕರಣದಿಂದ ರಂಗಭೂಮಿ ಬೆಳೆಯುವುದಿಲ್ಲ : ಬಿ.ಎಂ.ರಾಮಚಂದ್ರಪ್ಪ

ವ್ಯಾಪಾರೀಕರಣದಿಂದ ರಂಗಭೂಮಿ ಬೆಳೆಯುವುದಿಲ್ಲ. ರಂಗಭೂಮಿಯನ್ನು ಬೆಳೆಸುವ ಉದ್ದೇಶದಿಂದ ರಂಗಭೂಮಿಗೆ ಬರಬೇಕೇ ಹೊರತು ವ್ಯಾಪಾರೀಕರಣದ ದೃಷ್ಟಿಯಿಂದ ಬರಬಾರದು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ.ರಾಮಚಂದ್ರಪ್ಪ ಸಲಹೆ ನೀಡಿದರು.

ಮೈಸೂರಿನ ರಂಗಾಯಣದ ಶ್ರೀರಂಗದಲ್ಲಿ ನವೆಂಬರ್ 21ರಿಂದ 27ರವರೆಗೆ ಭಾರತೀಯ ರಂಗಶಿಕ್ಷಣ ಕೇಂದ್ರ ರಂಗಶಾಲೆ ವತಿಯಿಂದ ಪರಿಕರ ಕಾರ್ಯಾಗಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸೋಮವಾರ ಬಿ.ಎಂ.ರಾಮಚಂದ್ರಪ್ಪ ಬಣ್ಣ ಹಚ್ಚುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಯಾವುದೇ ದೊಡ್ಡ ನಟನಿಗಿಂತ ನೇಪಥ್ಯದಿಂದ ಕೆಲಸ ಮಾಡುವವರು ಮುಖ್ಯರಾಗುತ್ತಾರೆ. ಎಂಟು ದಿನಗಳ ಕಾಲ ರಂಗಾಯಣ ಕಾರ್ಯಾಗಾರವನ್ನು ಶಿಬಿರಾರ್ಥಿಗಳಿಗೆ ಕಲ್ಪಿಸಿದೆ. ಅದನ್ನು ಶಿಬಿರಾರ್ಥಿಗಳು ಚೆನ್ನಾಗಿ ಬಳಸಿಕೊಂಡು ಕಲೆಯನ್ನು ಕರಗತ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.

ಶಿಬಿರದ ಮಾರ್ಗದರ್ಶಕ ನೇಪಥ್ಯ ತಜ್ಞ ಪುರುಷೋತ್ತಮ ತಲವಾಟ ಮಾತನಾಡಿ ಶ್ರದ್ಧೆ, ತಾಳ್ಮೆಯಿಂದ ಕಲಿತರೆ ಕಲೆ ಸುಲಭವಾಗಿ ಕರಗತವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಕಲಾವಿದ ಮಂಜುನಾಥ ಬೆಳಕೆರೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: