ಮೈಸೂರು

ಚಿನ್ನ ಹಾಗೂ ನಗದು ಹೊಂದಿದ ವ್ಯಾನಿಟಿ ಬ್ಯಾಗ್ ಕಳವು

ಮಗನ ಮದುವೆಯಲ್ಲಿಯೇ ಹಣ ಹಾಗೂ ಚಿನ್ನಾಭರಣ ಹೊಂದಿದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡ ಪ್ರಕರಣವು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಗರದ ನಾಗರಬಾವಿ ನಿವಾಸಿ ಪುಷ್ಪಾ ತ್ಯಾಗರಾಜ್ ಅವರೇ ವ್ಯಾನಿಟಿ ಬ್ಯಾಗ್ ಕಳೆದುಕೊಂಡವರು. ಅವರ ಮಗನ ಮದುವೆಯೂ ನ.10ರಂದು ಸಾಮ್ರಾಟ್ ಕಲ್ಯಾಣಮಂಟಪದಲ್ಲಿ ನಡೆದಿತ್ತು. ಅಂದು ಮದುವೆ ಮುಗಿದ ಮೇಲೆ ಮನೆಗೆ ತೆರಳುವ ತರಾತುರಿಯಲ್ಲಿ ಛತ್ರದಲ್ಲಿಯೇ ವ್ಯಾನಿಟಿ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಮನೆಗೆ ಹೋದಾಗ ವ್ಯಾನಿಟಿ ಬ್ಯಾಗ್ ಇಲ್ಲದೇ ಇರುವುದು ಕಂಡು ಬಂದಿದ್ದು ತಕ್ಷಣವೇ ಮರಳಿ ಛತ್ರದಲ್ಲಿ ಹೋಗಿ ನೋಡಿದ್ದಾರೆ. ಅಲ್ಲಿ ಬ್ಯಾಗ ಇರಲಿಲ್ಲ. ಬ್ಯಾಗ್‍ನಲ್ಲಿ 16 ಗ್ರಾಮ್ ತೂಕದ ಚಿನ್ನದ ಓಲೆಗಳು, ಚಿನ್ನದ ಡಾಲರ್ ಹಾಗೂ ಸರ ಸೇರಿದಂತೆ ಒಟ್ಟು 36 ಗ್ರಾಮ್ ತೂಕದ ಚಿನ್ನ ಹಾಗೂ 35 ಸಾವಿರ ರೂಪಾಯಿ ನಗದು, ಎರಡು ಮೊಬೈಲ್‍ ಪೋನ್‍ಗಳಿದ್ದವು ಎಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

comments

Related Articles

error: